Advertisement

ಕಲ್ಲೂರ ಕುಟುಂಬಕ್ಕೆ ಪರಿಹಾರ ಒದಗಿಸಲು ಡಾ|ಸಿಂಗೆ ಆಗ್ರಹ

03:20 PM Aug 28, 2022 | Team Udayavani |

ಅಫಜಲಪುರ: ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಾನಂದ ಕಲ್ಲೂರ ಅಗಲಿಕೆ ದುಃಖ ತಂದಿದ್ದು, ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ಸರಕಾರಿ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ|ಸಂಗಣ್ಣ ಎಂ.ಸಿಂಗೆ ಆಗ್ರಹಿಸಿದರು.

Advertisement

ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶಿವಾನಂದ ಕಲ್ಲೂರ ರಾಜ್ಯಾದ್ಯಾಂತ ಅತಿಥಿ ಉಪನ್ಯಾಸಕರ ಸೇವೆ ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ಭದ್ರತೆ ಒದಗಿಸಬೇಕು ಎಂದು ಅವರು ನಿರಂತರವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರು. ಅವರ ಪ್ರಯತ್ನ ಫಲ ನೀಡುವ ಮುನ್ನವೇ ನಮ್ಮನ್ನು ಅಗಲಿದ್ದು ದುಃಖ ತಂದಿದೆ ಎಂದರು.

ಡಾ|ಸುರೇಖಾ ಕರೂಟಿ, ಮಮತಾ ಪಾಟೀಲ ಮಾತನಾಡಿ, ಶಿವಾನಂದ ಕಲ್ಲೂರ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದರು. ಮುಂಬರುವ ದಿನಗಳಲ್ಲಿ ಹೋರಾಟದ ತೀವ್ರತೆ ಹೆಚ್ಚಿಸುವುದಾಗಿ ಹೇಳುತ್ತಿದ್ದರು ಎಂದು ಸ್ಮರಿಸಿಕೊಂಡರು.

ಅತಿಥಿ ಉಪನ್ಯಾಸಕ ರಾಜೇಶ್ವರಿ ಸರಸಂಬಿ, ಸುರೇಶ, ಸಂತೋಷ ಡಾ|ಗಿರಿಜಾ ಪಾಟೀಲ, ಶ್ವೇತಾ ಗಜಾಕೋಶ, ಸುರೇಶ ಮುಗಳಿ, ಗೌರಿಶಂಕರ ಭೂರೆ, ಶಾಂತಪ್ಪ ಮೇಲಕೇರಿ, ನಾಗೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next