ಕೋಲಾರ: ಇತ್ತೀಚೆಗೆ ನಗರದಲ್ಲಿ ಚಿಕ್ಕಮಂಗಳೂರಿಗೆ ತೆರಳಿದ್ದ ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ನ.18ರಂದು ಕರೆ ನೀಡಿರುವ ಕೋಲಾರ ಬಂದ್ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಬೆಂಬಲಿಸಿ: ಚಿಕ್ಕಮಂಗಳೂರಿನ ದತ್ತಪೀಠಕ್ಕೆ ತೆರಳಿದ್ದ ಹಿಂದೂಪರ ಸಂಘಟನೆಗಳ ಯುವಕರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಬುಧವಾರ ಹಿಂದೂಪರ ಸಂಘಟನೆಗಳ ಮುಖಂಡರು ಬೈಕ್‌ಗಳಲ್ಲಿ ಘೋಷಣೆ ಕೂಗುತ್ತಾ ರ್ಯಾಲಿ ನಡೆಸಿ ಬಂದ್‌ಗೆ ಎಲ್ಲ ಹಿಂದುಗಳು, ಸಾರ್ವಜನಿಕರು, ವರ್ತಕರು, ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ರ್ಯಾಲಿ: ಬೈಕ್ ರ್ಯಾಲಿ ಗಾಂಧಿವನದಿಂದ ಆರಂಭಗೊಂಡು ದೊಡ್ಡಪೇಟೆ, ಶಾರದಾಟಾಕೀಸ್ ರಸ್ತೆ, ಡೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ, ಹೋಟೆಲ್ ಇಂಡಿಯಾ ವೃತ್ತ, ಬಸ್ ನಿಲ್ದಾಣ ವೃತ್ತ, ಕಾಳಮ್ಮ ಗುಡಿ, ಕಾಲೇಜು ವೃತ್ತ, ಗೌರಿಪೇಟೆ ಮೂಲಕ ಚಂಪಕ್ ವೃತ್ತದಲ್ಲಿ ಕೊನೆಗೊಂಡಿತು.
ಪ್ರತಿಭಟನೆ: ಬಂದ್ ಹಿನ್ನೆಲೆ ಪೊಲೀಸರು ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶದಲ್ಲಿ ಖಾಕಿ ಪಡೆ ನಿಯೋಜಿಸಿ ನಾಕಾ ಬಂದಿ ಕೈಗೊಂಡಿತ್ತು. ರ್ಯಾಲಿ ಕ್ಲಾಕ್ ಟವರ್ ಕಡೆ ಪ್ರವೇಶಿಸದಂತೆ ಶಾರದಾ ಟಾಕೀಸ್ ರಸ್ತೆ, ಕೆಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತ ಹಾಗೂ ಶ್ರೀವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ಬ್ಯಾರಿಕೇಡ್ ಹಾಕಿ ಸಂಚಾರ ನಿಷೇಧಿಸಿದ್ದರು. ಇದರಿಂದ ವಾಹನ ಸಂಚಾರ ಕಷ್ಟಕರವಾಗಿತ್ತು.
ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಂದ್ ಬಂದ್ ಕುರಿತು ಮಾಹಿತಿ ನೀಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮೇಶ್‌ರಾಜ್, ಭಜರಂಗದಳದ ಬಾಲಾಜಿ, ಬಾಬು, ಗುರುವಾರ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹಿಂದೂ ಜಾಗರಣಾ ವೇದಿಕೆ ಜಗದೀಶ್‌ಕಾರಂತ್, ಸಕಲೇಶಪುರ ರಘು ನಗರಕ್ಕೆ ಆಗಮಿಸಲಿದ್ದು, ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ನಗರದ ಕ್ಲಾಕ್ ಟವರ್ ರಸ್ತೆ ಯಾವುದೇ ಒಂದು ಸಮುದಾಯದ ಸ್ವತ್ತಲ್ಲ, ಈ ನಗರದ ಪ್ರತಿ ಪ್ರಜೆಯೂ ಅಲ್ಲಿ ಓಡಾಡಲು ಅವಕಾಶವಿದೆ.
ವಿನಾಕಾರಣ ನಮ್ಮ ತಂಟೆಗೆ ಬರುತ್ತಿದ್ದಾರೆ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. ದತ್ತಪೀಠಕ್ಕೆ ಹೊರಟಿದ್ದ ಬಸ್ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡನೀಯ. ಸಮುದಾಯದಲ್ಲಿ ಶಾಂತಿ ಕದಡುವ ಇಂತಹ ಹೇಯ ಕೃತ್ಯ ನಡೆಸಿದವರನ್ನು ಬಂಧಿಸಬೇಕು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆದಂರು. ಬೈಕ್ ರ್ಯಾಲಿಯಲ್ಲಿ ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ವಿಹಿಂಪದ ಡಾ.ಶಿವಣ್ಣ, ವಿಜಯಕುಮಾರ್, ಜಯಂತಿಲಾಲ್, ಹಿಂದುಪರ ಸಂಘಟನೆಗಳ ಮುಖಂಡರಾದ ಬಾಬು, ಬಾಲಾಜಿ, ರಮೇಶ್‌ರಾಜ್, ಮಹೇಶ್, ಜಗ್ಗ, ಓಂಪ್ರಕಾಶ್, ನಾಗರಾಜ್, ಕೆ.ಪಿ.ನಾಗರಾಜ್, ಅರುಣ್, ಸುಪ್ರೀತ್, ಮಂಜುನಾಥ್, ವಿಶ್ವನಾಥ್, ಲಡ್ಡು ಮತ್ತಿತರರಿದ್ದರು.
ಬಂದ್: ನಷ ಭರ್ತಿಗೆ ಕ್ಲೇಮ್ ಕಮಿಷನರ್ ನೇಮಕಕ್ಕೆ ಆಗ್ರಹ
ಕೋಲಾರ: ಕೋಲಾರದಿಂದ ದತ್ತ ಮಾಲೆಗೆ ತೆರಳುತ್ತಿದ್ದ ಹಿಂದೂ ಕಾರ್ಯಕರ್ತ ಮೇಲಿನ ಹಲ್ಲೆ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಅನವಶ್ಯಕವಾಗಿ ಬಂದ್‌ಗೆ ಕರೆ ನೀಡಿದ್ದು ಸರ್ಕಾರ ಮತ್ತು ಸಾರ್ವಜನಿಕರ ಆಸ್ತಿ -ಪಾಸ್ತಿಗೆ ನಷ್ಟ ಉಂಟಾಗುತ್ತದೆ. ನಷ್ಟ ಭರ್ತಿ ಗೆ ಕ್ಲೇಮ್ ಕಮಿಷನರ್ ನೇಮಕ ಮಾಡಲು ಕೋರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಾಮಾ ಜಿಕ ಕಾರ್ಯಕರ್ತ ಕೂಟೇರಿ ಮನ ಯ್ಯ ಮನವಿ ಸಲ್ಲಿಸಿದ್ದಾರೆ.
ನ.7 ರಂದು ರಂದು ದತ್ತ ಮಾಲೆಧಾರಿಗಳು ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶ ದಲ್ಲಿ ಪ್ರಚೋಧನಾಕಾರಿ ಘೋಷಣೆ ಕೂಗಿ, ಉದ್ರೇಕಕಾರಿ ಸನ್ನಿವೇಶ ಸೃಷ್ಟಿಸಿದ್ದರಿಂದ ಕೆಲ ಕಿಡಿಕೇಡಿಗಳು ಪರಿಸ್ಥಿತಿ ಲಾಭ ಪಡೆಯಲು ಯತ್ನಿಸಿ ದ್ದಾರೆ. ತಕ್ಷಣವೇ, ಪೊಲೀಸರ ಪ್ರವೇಶದಿಂದ ಅನಾಹುತ ತಪ್ಪಿದ್ದು, ಈಗಾಗಲೆ ಹಲವರ ಬಂಧನವೂ ಆಗಿದೆ.
ಇದನ್ನೂ ಓದಿ:- ಷೇರುಪೇಟೆ ವಹಿವಾಟಿಗೆ ಪೇಟಿಎಂ; ಮೊದಲ ದಿನದ ವಹಿವಾಟಿನಲ್ಲಿ ಶೇ.26ರಷ್ಟು ಇಳಿಕೆ ಕಂಡ ಷೇರು
ಹೀಗಿರುವಾಗ ನ.18 ರಂದು ಕೆಲವರು ಕೋಲಾರ ಬಂದ್‌ಗೆ ಕರೆ ನೀಡಿ, ಪ್ರಕ್ಷುಬ್ದ ಸ್ಥಿತಿ ನಿರ್ಮಾಣ ಮಾಡಲು ಹೊರ ಟಿ ದ್ದಾರೆ. ಬುಧವಾರ ಬಂದ್ ಪ್ರಯುಕ್ತ ಸರ್ಕಾರ, ಸಾರ್ವ ಜನಿಕರಿಗೆ ಕೋಟ್ಯಂತರ ರೂ.ಹಣ ನಷ್ಟವಾ ಗುವದರಿಂದ ಸರ್ವೋತ್ಛ ನ್ಯಾಯಾಲ ಯದ ನಿರ್ದೇಶನದಂತೆ “ನಷ್ಟ ಭರ್ತಿ’ಗೆ ಕೈಮ್ ಕಮೀಷನರ್ ನೇಮಕ ಮಾಡಿ ಬಂದ್ ಆಯೋ ಜಕ ರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಒತ್ತಾಯ.
ಬಂದ್‌ಗೆ ಕರೆ ನೀಡಿರುವುದು ಅಕ್ರಮ: ಐಜಿಪಿ
ಕೋಲಾರ: ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಬಂದ್‌ಗೆ ಕರೆ ಅಕ್ರಮವಾಗಿದ್ದು, ಈ ಕುರಿತು ಬಂದ್ ಗೆ ಕರೆ ನೀಡಿದವರಿಗೂ ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹೇಳಿದರು.ಹಿಂದೂ ಪರ ಸಂಘಟನೆಗಳು ನ.18 ರಂದು ಕೋಲಾರ ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಿ ಕೋಲಾರಕ್ಕೆ ಆಗಮಿಸಿ ಎಸ್ಪಿ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು.
ಅಧಿಕಾರಿ ವರ್ಗವನ್ನು ಪ್ರತ್ಯೇಕ ಸಭೆಗಳಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಂದ್ ಕುರಿತಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ಮುನ್ನೆಚ್ಚರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಯಾವುದೇ ಚಿಂತೆ ಅನಗತ್ಯವೆಂದರು. ಈಗಾಗಲೇ ಮಿನಿ ಬಸ್ ಮೇಲೆ ಕಲ್ಲು ತೂರಿದ ಘಟನೆಗೆ ಸಂಬಂಧಪಟ್ಟಂತೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ, ತನಿಖೆ ಮುಂದುವರಿದಿದ್ದು ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯೂ ಇದೆ ಎಂದರು.
ಕೋಲಾರ ಬಂದ್ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಇತರರು ಜಿಲ್ಲೆಯ ಹೊರಗಿನಿಂದ ಬರುತ್ತಿರುವ ಬಗ್ಗೆ ಮತ್ತು ವೇದಿಕೆ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ, ಮಾಹಿತಿ ಸಿಕ್ಕರೆ ಪ್ರತಿಕ್ರಿಯಿಸುವೆ, ನಾಳೆ ಆಗುವ ಘಟನೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡುವೆ ಇವತ್ತೇ ಮಾತನಾಡುವುದು ಸರಿಯಲ್ಲ ಎಂದರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಸ್ಪಿ ಡೆಕ್ಕಾ ಕಿಶೋರ್‌ಬಾಬು ಮತ್ತಿತರರಿದ್ದರು.