Advertisement

ಕಾಡು ಪ್ರಾಣಿಗಳ ಹಾವಳಿ ತಡೆಗೆ ಆಗ್ರಹಿಸಿ ಧರಣಿ ಆರಂಭ

12:09 PM Jul 20, 2021 | Team Udayavani |

ರಾಮನಗರ: ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ ಎಂದು ಆರೋಪಿಸಿ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಆಶ್ರಯದಲ್ಲಿರೈತರು ಇಲ್ಲಿನ ಜಿಲ್ಲಾ ಅರಣ್ಯ ಅಧಿಕಾರಿಗಳ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿಗೆ ಧರಣಿ ಆರಂಭಿಸಿದ್ದಾರೆ.

Advertisement

2008ರಿಂದ ಜಿಲ್ಲೆಯಲ್ಲಿ ಆನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ತೆಂಗು, ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶವಾಗುತ್ತಿವೆ. ಮಾನವ ಹಾನಿಯೂ ಆಗಿದೆ. ಆದರೆ,ಅಂದಿನಿಂದಲೂ ಆನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾರಿಕೇಡ್‌ ನಿರ್ಮಾಣ ನೆರವೇರಿಲ್ಲ: ಕಾಡಂಚಿನಲ್ಲಿ ಬ್ಯಾರಿಕೇಡ್‌ ನಿರ್ಮಾಣ ಮಾಡುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ, ನೆರವೇರಿಲ್ಲ, ಇತ್ತರೈತರಿಗೆ ನಷ್ಟ ನಿರಂತರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಡು ಪ್ರಾಣಿಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಕಾವೇರಿ ವನ್ಯ ಜೀವಿ ಧಾಮದ ಅಧಿಕಾರಿಗಳುಮತ್ತು ಜಿಲ್ಲೆಯ ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯೇ ಇರುವುದೇ ಕಾಡು ಪ್ರಾಣಿಗಳು ನಾಡಿಗೆ ಬಂದು ರೈತಾಪಿಕುಲವನ್ನು ಸಂಕಷ್ಟಕ್ಕೆ ದೂಡಲು ಕಾರಣವಾಗಿದೆ ಎಂದು ದೂರಿದರು.

ಅರಣ್ಯ ಇಲಾಖೆ ಪರಿಹಾರ ನೀಡಲಿ: ಕಾಡುಪ್ರಾಣಿಗಳ ದಾಳಿಯಿಂದಾದ ನಷ್ಟಕ್ಕೆ ಅರಣ್ಯ ಇಲಾಖೆಯೇ ನಷ್ಟ ಪರಿಹಾರ ಕೊಡಬೇಕಾಗಿದೆ. ಆದರೆ, ಇಲಾಖೆಯ ಮಾನದಂಡದ ಪ್ರಕಾರವೂ ಅಧಿಕಾರಿಗಳು ನಷ್ಟವನ್ನು ಧರಿಸಿಕೊಡುತ್ತಿಲ್ಲ. ಬೆಳೆ ಹಾನಿಗೆ ಕನಿಷ್ಠ 5 ಪಟ್ಟು ಹೆಚ್ಚಿನ ಪರಿಹಾರವನ್ನು ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

ಸಚಿವರು, ಸಿಸಿಎಫ್ ಭೇಟಿಗೆ ಒತ್ತಾಯ: ಸಮಸ್ಯೆಗಳಿಗೆ ತಾವು ಸ್ಪಂದಿಸುವುದಾಗಿ, ಧರಣಿ ಕೈಬಿಡುವಂತೆ ಡಿಸಿಎಫ್ ದೇವರಾಜು ಅವರು ಮಾಡಿಕೊಂಡ ಮನವಿಗೆ ರೈತರು ಒಪ್ಪಲಿಲ್ಲ. ಅರಣ್ಯ ಸಚಿವರು ಮತ್ತು ಸಿಸಿಎಫ್ ಅವರು ಸ್ಥಳಕ್ಕೆ ಬಂದುಭರವಸೆ ನೀಡುವ ತನಕ ತಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್‌, ರಾಜ್ಯಘಟಕದಉಪಾಧ್ಯಕ್ಷರಾದಅನಸೂಯಮ್ಮ,ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ರಾಮನಗರ ತಾಲೂಕು ಘಟಕದಅಧ್ಯಕ್ಷ ಸೀಬಕಟ್ಟೆ ಕೃಷ್ಣಪ್ಪ, ಪ್ರಮುಖರಾದ ವಿ.ಎಸ್‌.ಸುಜೀವನ್‌ ಕುಮಾರ್‌, ರುದ್ರಪ್ಪ, ರಮೇಶ್‌,ಗೋವಿಂದರಾಜು, ಅನಂತರಾಮು, ಕುಮಾರ್‌,ಕುಳ್ಳೆಗೌಡ, ಕಾಳೇಗೌಡ, ಕೃಷಿಕ ಸಮಾಜದ ಬಿ.ಟಿ. ನಾಗೇಶ್‌ ಹಾಜರಿದ್ದರು.

ಬೆಳೆ ಹಾನಿಗೆ ನವಿಲು ಸಹಕಾರಣ! :

ಆನೆ,ಕಾಡು ಹಂದಿ ಇತ್ಯಾದಿ ಕಾಡು ಪ್ರಾಣಿಗಳ ಹವಾಳಿಯ ಮಾತ್ರವಲ್ಲದೆ ನವಿಲು ಸಹ ರೈತರ ಬೆಳೆ ನಷ್ಟಕ್ಕೆಕಾರಣವಾಗುತ್ತಿದೆ. ಇತ್ತಿಚೀನ ವರ್ಷಗಳಲ್ಲಿ ನವಿಲುಗಳು ಗ್ರಾಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನವಿಲುಗಳು ಭೂಮಿಯಲ್ಲಿ ಬಿತ್ತಿದ ಬೀಜಗಳನ್ನೇ ಹೆಕ್ಕಿ ತಿಂದು ಬಿಡುತ್ತಿವೆ ಎಂದು ರೈತ ಮುಖಂಡರು ನೋವು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next