Advertisement

ಮಾವು ಬೆಳೆಗಾರರ ನೆರವಿಗೆ ಬರಲು ಮನವಿ 

06:15 AM Jul 07, 2018 | Team Udayavani |

ವಿಧಾನಸಭೆ: ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿದು ಮತ್ತು ರೋಗ ಬಂದು ರೈತರು ಅವುಗಳನ್ನು ರಸ್ತೆ ಬದಿ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸುವಂತೆ ಸಭಾಧ್ಯಕ್ಷ ರಮೇಶ್‌ಕುಮಾರ್‌, ತೋಟಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Advertisement

ಕಲಾಪದ ಮಧ್ಯೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್‌, ತೋಟಗಾರಿಕಾ ಸಚಿವ ಸಿ.ಎಸ್‌.ಮನಗೂಳಿ ಅವರ ಕುರಿತು, ಮಾವಿನ ಹಣ್ಣಿಗೆ ಕೆಟ್ಟ ರೋಗ ಬಂದು ಮಾರುಕಟ್ಟೆಯಲ್ಲಿ ಅದನ್ನುಕೊಳ್ಳುವವರಿಲ್ಲದೆ ರೈತರು ರಸ್ತೆ ಬದಿ ಸುರಿಯುತ್ತಿದ್ದಾರೆ.

ಆಂಧ್ರಪ್ರದೇಶದಲ್ಲಿ ಮಾವಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಈ ಕುರಿತು ಯೋಚಿಸಿ ಎಂದು ಸಲಹೆ ಮಾಡಿದರು. ಅಲ್ಲದೆ, ಮುಖ್ಯಮಂತ್ರಿ ಕುರಿತು, ಈ ಬಗ್ಗೆ ಗಮನಹರಿಸಬೇಕೆಂದು ಕೋರಿದರು. ಮಧ್ಯಪ್ರವೇಶಿಸಿದ ಕಾನೂನು ಸಚಿವ ಕೃಷ್ಣಬೈರೇಗೌಡ, ಮಾವಿನ ಹಣ್ಣು ಮತ್ತು ನಿಪ ವೈರಸ್‌
ಮಧ್ಯೆ ನೆಂಟಸ್ಥನ ಹುಟ್ಟಿಸಿ ಜನರಲ್ಲಿ ಮಾವಿನ ಕುರಿತು ಆತಂಕ ಉಂಟುಮಾಡಲಾಗಿದೆ. ಇದರಿಂದ ಬೆಲೆ
ಕುಸಿದಿದೆ. ಈ ಬೇಜವಾಬ್ದಾರಿ ಮತ್ತು ತಪ್ಪು ಮಾಹಿತಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನನಗಿರುವ ಮಾಹಿತಿ ಪ್ರಕಾರ ಮಾವಿನ ಹಣ್ಣಿನಿಂದ ನಿಪ ವೈರಸ್‌ ಹರಡುವುದಿಲ್ಲ ಎಂದರು. ಆರೋಗ್ಯ ಸಚಿವ
ಶಿವಾನಂದ ಪಾಟೀಲ್‌ ಮಾತನಾಡಿ, ಮಾವಿನ ಹಣ್ಣಿನಿಂದ ನಿಪ ವೈರಸ್‌ ಹರಡುತ್ತದೆಂದು ಕೆಲ ಮಾಧ್ಯಮಗಳಲ್ಲಿ
ಪ್ರಕಟವಾಗುತ್ತಿದ್ದಂತೆ ಇಲಾಖೆಯಿಂದ ಪ್ರಕಟಣೆ ಹೊರಡಿಸಿ ಜಾಗೃತಿ ಮೂಡಿಸುವ ಕೆಲಸವಾಗಿದೆ ಎಂದರು.

ಆದರೆ, ಇದಕ್ಕೆ ಪ್ರಚಾರ ಸಿಗಲಿಲ್ಲವೆಂದು ಇತರೆ ಸದಸ್ಯರು ಹೇಳಿದಾಗ, ನಾಯಿ ಮನುಷ್ಯನಿಗೆ ಕಚ್ಚಿದರೆ
ಸುದ್ದಿಯಾಗುವುದಿಲ್ಲ. ಮನುಷ್ಯ ನಾಯಿಗೆ ಕಚ್ಚಿದಾಗ ಮಾತ್ರ ಸುದ್ದಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ
ಮಾಧ್ಯಮಗಳ ವಿರುದಟಛಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ, ಮಾಧ್ಯಮದವರು ಸೇರಿ ಶಾಸಕಾಂಗ,
ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರೆಲ್ಲರೂ ಮನುಷ್ಯರೇ, ಸ್ವಯಂ ನಿಗ್ರಹ
ಹಾಕಿಕೊಳ್ಳಬೇಕು. ಇಲ್ಲದಿದ್ದರೆ ನಮಗೆ ಕಷ್ಟವಾಗುತ್ತದೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next