ಮುಂಬಯಿ: ಚಿಂತಾಜನಕ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಅವರ ಆಪ್ತ ಸಂಬಂಧಿಗಳಿಗೆ ಅವಕಾಶ ನೀಡುವಂತೆ ಶಿವಸೇನೆ ಕಾರ್ಪೊರೇಟರ್ ಮತ್ತು ಬಿಎಂಸಿಯ ಸುಧಾರಣಾ ಸಮಿತಿಯ ಅಧ್ಯಕ್ಷ ಸದಾನಂದ್ ಪರಬ್ ಅವರು ಬಿಎಂಸಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೊರೊನಾ ಸೋಂಕಿತರು ಒಂಟಿಯಾಗಿರು ವಾಗ ಅವರ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ವಾರಂಟೈನ್ ಸಂದರ್ಭ ಅವರನ್ನು ಕಾಣಲು ಸಂಬಂಧಿಗಳಿಗೆ ಅವಕಾಶ ನೀಡಿದ್ದಲ್ಲಿ ಅವರು ವೇಗವಾಗಿ ಚೇತರಿಸಿಕೊಳ್ಳಬಹುದು ಎಂದು ಕಾರ್ಪೊರೇಟರ್ ಹೇಳಿದ್ದಾರೆ.
ನಗರದ ಆಸ್ಪತ್ರೆಗಳು ರೋಗಿಗಳು ನಿರಾಳವಾಗಿ ಮತ್ತು ಒತ್ತಡರಹಿತವಾಗಿರಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರೋಗಿಗಳು ಮತ್ತು ಅವರ ಕುಟುಂಬಗಳ ನಡುವೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಪಿಪಿಇ ಕಿಟ್‌ಗಳನ್ನು ಧರಿಸುವುದು ಸೇರಿದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದು
ಕೊಳ್ಳುವ ಮೂಲಕ ರೋಗಿಯನ್ನು ನೋಡಲು ತಕ್ಷಣದ ರಕ್ತಸಂಬಂಧಿಗಳಿಗೆ ಅವಕಾಶ ನೀಡಬೇಕು ಎಂದು ಪರಬ್ ಒತ್ತಾಯಿಸಿದ್ದಾರೆ.
ಸೋಂಕಿತರ ಸಂಬಂಧಿಗಳು ಕೋವಿಡ್ ವಾರ್ಡ್‌ಗಳಿಗೆ ಪ್ರವೇಶಿಸುವುದನ್ನು ನಿರ್ಬಂ ಧಿಸಲಾಗಿದೆ. ನಿರ್ಣಾಯಕ ರೋಗಿಗಳಿಗೆ 14 ದಿನಗಳ ಕಾಲ ರಕ್ತಸಂಬಂಧಿಗಳನ್ನು ಭೇಟಿ ಮಾಡಲು ಅನುಮತಿಯಿಲ್ಲ, ಅನೇಕ ಕುಟುಂಬಗಳು ಕೊರೊನಾದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದು, ಈ ಕ್ರಮ ಅನುಷ್ಠಾನದಿಂದ ಸೋಂಕಿತರಿಗೆ ಭಲ ಬರುತ್ತದೆ ಎಂದು ಶಿವಸೇನೆ ಕಾರ್ಪೊರೇಟರ್ ಸದಾನಂದ್ ಪರಬ್ ಅವರು ಹೇಳಿದ್ದಾರೆ.