Advertisement

ಸಕಾಲದಲ್ಲಿ ಸಾಲ ಮರುಪಾವತಿಸಲು ಮನವಿ

04:03 PM Jun 29, 2019 | Team Udayavani |

ಕೆ.ಆರ್‌.ಪೇಟೆ: ಸದಸ್ಯರು ಸಂಘದ ಸಾಲ ವನ್ನು ಸದ್ಭಳಕೆ ಮಾಡಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಘಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಪುರಸಭೆ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್‌ ಮನವಿ ಮಾಡಿದರು.

Advertisement

ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪತ್ತಿನ ಸಹಕಾರ ಸಂಘದ ಪ್ರಥಮ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಉಳಿದು ಹೆಮ್ಮರವಾಗಿ ಬೆಳೆದರೆ ಮಾತ್ರ ರೈತರು ಹಾಗೂ ಜನಸಾಮಾನ್ಯರ ರಕ್ತವನ್ನು ಹೀರುತ್ತಿರುವ ಖಾಸಗಿ ಲೇವಾದೇವಿದಾರರು ಹಾಗೂ ಚಕ್ರಬಡ್ಡಿ, ಮೀಟರ್‌ ಬಡ್ಡಿಯ ದಂಧೆ ತಡೆದು ಬಡಜನರು ನೆಮ್ಮದಿಯ ಜೀವನವನ್ನು ನಡೆಸಲು ಸಹಾಯ ಮಾಡಬಹುದಾಗಿದೆ ಎಂದು ಹೇಳಿದರು.

ಸಹಕಾರ ಸಂಘಗಳು ವರದಾನ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಜನರು ತಮಗೆ ವರವಾಗಿ ಸಿಕ್ಕಿರುವ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಷೇರುದಾರರಾಗುವ ಮೂಲಕ ಸರ್ಕಾರವು ಬಡವರಿಗಾಗಿಯೇ ನೀಡುತ್ತಿರುವ ಬಡ್ಡಿರಹಿತ ಸಾಲಗಳು ಹಾಗೂ ಸಬ್ಸಿಡಿ ಸಾಲ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ಪ್ರಗತಿಯ ಧಿಕ್ಕಿನತ್ತ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಕಮಲಾಕ್ಷಿ, ರಮೇಶ್‌, ಜ್ಯೋತಿಲಕ್ಷ್ಮೀ, ಚೆಲುವರಾಜು, ಶಿವಪ್ರಕಾಶ್‌, ವೆಂಕಟೇಶ್‌, ಮೋಹನ, ಶೋಭಾ, ಕವಿತಾ, ರೇಣುಕಮ್ಮ, ಮಲ್ಲೇಶ್‌, ಜಕ್ಕನಹಳ್ಳಿ ರಾಜೇಶ್‌, ಮೂರ್ತಿ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next