Advertisement
ತಾಲೂಕಿನಲ್ಲಿ ಅಘನಾಶಿನಿ ನದಿಯನ್ನೇ ನಂಬಿ ಬದುಕುವ 30 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಅಘನಾಶಿನಿ ಜೀವನದಿಯಾಗಿದ್ದು, ವಿಶಿಷ್ಟತೆ, ವಿಶೇಷತೆಗಳ ಆಗರವಾಗಿದೆ. ಇಂತಹ ನದಿಯನ್ನು ಅವೈಜ್ಞಾನಿಕ ಕಾಮಗಾರಿಯಿಂದ ಹಾಳುಗೆಡಹುವುದು ಹಾಗೂ ನದಿಯನ್ನೇ ನಂಬಿರುವ ಜನರ ಬದುಕಿಗೆ ಶಾಶ್ವತ ಬರೆ ಎಳೆಯುವುದು ಸರಿಯಲ್ಲ. ಅಘನಾಶಿನಿ ನದಿಯಲ್ಲಿ ಕೆಂಪುಮಣ್ಣು ಸುರಿದು ನೀರಿನ ಹರಿವಿಗೆ ಮಾತ್ರವಲ್ಲದೇ ದೋಣಿಗಳ ಸುಗಮ ಸಂಚಾರಕ್ಕೂ ಅಡ್ಡಿಪಡಿಸಿರುವುದು ತುರ್ತು ಸಮಸ್ಯೆ ಮಾತ್ರವಲ್ಲದೇ ಹಲವಾರು ದೂರಗಾಮಿ ಸಮಸ್ಯೆಗಳಿಗೂ ಕಾರಣವಾಗಲಿದೆ. ಈ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ, ಪ್ರತಿಭಟನೆಗಳನ್ನು ಮಾಡಿದ್ದರೂ ಸಮಸ್ಯೆ ಬಗೆಹರಿಸುವ ಭರವಸೆ ಮಾತ್ರ ಈಡೇರಿಲ್ಲ. ದೋಣಿಗಳನ್ನು ಕ್ರೇನ್ ಮೂಲಕ ದಾಟಿಸುವ ವಿಧಾನವೂ ಸುರಕ್ಷಿತ ಹಾಗೂ ಸಮರ್ಪಕ ಕ್ರಮವಲ್ಲ.
Advertisement
ಅಘನಾಶಿನಿ ನದಿಗೆ ಅಡ್ಡಗಟ್ಟಿದ ಮಣ್ಣು ತೆರವಿಗೆ ಮನವಿ
03:41 PM May 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.