Advertisement

ಸೌಲಭ್ಯಕ್ಕಾಗಿ ಮುದ್ರಣ ಕಾರ್ಮಿಕರ ಮನವಿ

08:29 AM Jul 06, 2017 | |

ದಾವಣಗೆರೆ: ಅಸಂಘಟಿತ ವಲಯದಲ್ಲಿರುವ ಮುದ್ರಣ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕ ಮಾದರಿ ಗುರುತಿನ ಚೀಟಿ, ವಿವಿಧ ಸೌಲಭ್ಯ ಒದಗಿಸಲು ಒತ್ತಾಯಿಸಿ ಮುದ್ರಣ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ಮನವಿ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಸುಮಾರು 25  ಸಾವಿರದಿಂದ 30 ಸಾವಿರಕ್ಕೂ ಹೆಚ್ಚು ಮುದ್ರಣ ಕಾರ್ಮಿಕರು ಮುದ್ರಣಾಲಯದಲ್ಲಿ ದುಡಿಯುತ್ತಿದ್ದಾರೆ. ಕೆಲಸವಿದ್ದಾಗ ಕೆಲಸ ಮಾಡಿ, ಇಲ್ಲದಾಗ  ಅರೆ ಬರೆ ಹೊಟ್ಟೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಈಗ ಗಣಕಯಂತ್ರಗಳ ಪೈಪೋಟಿಯಿಂದಾಗಿ ಮುದ್ರಣ  ಕಾರ್ಮಿಕರು ಬಹಳ ಸಂಕಷ್ಟದಲ್ಲಿದ್ದಾರೆ ಎಂದು ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಕೋರಿದ್ದಾರೆ. ಅನೇಕರು ಮನೆ ಇಲ್ಲದೆ, ಮಕ್ಕಳಿಗೆ ಸರಿಯಾಗಿ ವಿದ್ಯಾಭ್ಯಾಸ ಕೊಡಿಸಲಾಗದೆ 
ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಮುದ್ರಣ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರಕ್ಕೆ, ಕಾರ್ಮಿಕರ ಇಲಾಖೆಗೆ ಅನೇಕ ಪತ್ರ ಬರೆಯಲಾಗಿದೆ. ಹೋರಾಟ ನಡೆಸಲಾಗಿದೆ. ಆದರೆ, ಈವರೆಗೂ ಯಾವುದೇ ಸೌಲಭ್ಯ ಒದಗಿಸಲಾಗಿಲ್ಲ. ಈಚೆಗೆ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಮುದ್ರಣ ಕಾರ್ಮಿಕರನ್ನು ಸೇರ್ಪಡಿಸಿರುವುದು ಸಂತೋಷ ವಿಷಯ ಎಂದರು.

ಕಾರ್ಮಿಕರ ಮನವಿಗೆ ಆಲಿಸಿದ ಸಚಿವರು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸಲು ಸಂಬಂಧಿತರ ಗಮನಕ್ಕೆ
ತರಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಅಧ್ಯಕ್ಷ ಎನ್‌. ರಾಜೇಂದ್ರ ಬಂಗೇರಾ, ಫಕೃದೀªನ್‌, ಕೆ.ಆರ್‌.
ಮಲ್ಲಿಕಾರ್ಜುನ್‌, ಜಿ.ಎನ್‌. ವಸಂತಕುಮಾರ್‌, ಮೃತ್ಯುಂಜಯ, ರಾಘವೇಂದ್ರ, ನಾಗರಾಜ ಪವಾರ್‌,  ಯದ್‌ ಉಮ್ಮರ್‌, ಕೆ. ವೀಣಾ, ರೇಣುಕಾ, ಸೃಷ್ಟಿ ನಾಗರಾಜ್‌, ಗಂಗೋತ್ರಿ ಬಸವರಾಜ್‌, ಶಿವಕುಮಾರಸ್ವಾಮಿ ಇತರರು ಇದ್ದರು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next