Advertisement

ಜಿಲ್ಲಾಡಳಿತಕ್ಕೆ ಸಂಘಟನೆಗಳ ಮನವಿ

02:45 PM Nov 10, 2019 | Suhan S |

ವಿಜಯಪುರ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸವೊತ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ಪ್ರಾಂತ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ನೇತೃತ್ವದಲ್ಲಿ ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳು, ಇಂಥ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ಪಕ್ಷಗಳು ತಮ್ಮ ಉನ್ನತಿಗೆ ಬಳಸಿಕೊಂಡಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಹಿಂಸಾಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಸಂಸದೀಯ ಅಂಗವು ಹಲವು ದಶಕಗಳಿಂದಲೇ ಸಂವಿಧಾನದ ಅಡಿಯಲ್ಲಿ ತನ್ನ ಶಕ್ತಿಯನ್ನು ಕ್ರಮೇಣವಾಗಿ ಸವೆಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮ ರಂಗವೂ ಬಹುತೇಕವಾಗಿ ಇತ್ತೀಚೆಗೆ ಆಡಳಿತಾಂಗದ ಗಿಣಿಯಾಗಿದೆ. ಹೀಗಾಗಿ ಆಡಳಿತ ವರ್ಗಕ್ಕೆ ಸತ್ಯವನ್ನು ಹೇಳುವ ಶಾಂತಿಯನ್ನು ಕಾಪಾಡುವ, ನ್ಯಾಯಕ್ಕಾಗಿ ಹೋರಾಡುವ ಜವಾಬ್ದಾರಿ ನಾಗರಿಕರದ್ದಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ನಾವೀಗಮತ, ಜಾತಿ, ಪ್ರಾಂತ, ಲಿಂಗ, ಲೈಂಗಿಕತೆ, ಭಾಷೆ ಸಾಂಸ್ಕೃತಿಕ ನಂಬಿಕೆಗಳ ಭಿನ್ನತೆಗಳನ್ನು ಲೆಕ್ಕಿಸದೇ ಪ್ರತಿಯೊಬ್ಬರು ಜೀವ ಸ್ವಾತಂತ್ರ ಹಾಗೂ ಮೂಲಭೂತ ಹಕ್ಕುಗಳಾಗಿ ಮುಂದಾಗಬೇಕಾದ ಸಮಯ ಬಂದಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ, ಎಸ್‌.ವೈ. ನಡುವಿನಕೇರಿ, ಜನವಾದಿ ಮಹಿಳಾ ಸಂಘಟನೆಯ ಸೋನುಬಾಯಿ ಬ್ಯಾಳಿ, ಸುಮಂಗಲಾ ಪೂಜಾರಿ, ಎಸ್‌.ಐ. ಕಿಣಗಿ, ಅಪ್ಪಾಸಾಹೇಬ ಯರನಾಳ, ಮಹಾದೇವ ರಾವಜಿ, ಯುವರಾಜ ಚೋಳಕೆ, ಹೀರಾಬಾಯಿ ಹಜೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next