Advertisement

ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಸಂಸದರಿಗೆ ಮನವಿ

08:49 PM May 02, 2019 | Sriram |

ಕುಂದಾಪುರ: ಹೆದ್ದಾರಿ ಅವ್ಯವಸ್ಥೆ ಸರಿಪಡಿಸಿಕೊಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಗುರುವಾರ ಮನವಿ ನೀಡಲಾಯಿತು.

Advertisement

ಕುಂದಾಪುರ ಪುರಸಭೆಯ 6ನೇ ವಾರ್ಡಿನ ಚಿಕ್ಕನ್‌ಸಾಲ್‌ ಎಡಬದಿ ವಾರ್ಡಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿದ್ದು ಹೆದ್ದಾರಿಯ ಪಾರ್ಶ್ವದ ಪಕ್ಕದಲ್ಲಿ ಸುಮಾರು 650 ಮೀ. ಸರ್ವಿಸ್‌ ರಸ್ತೆ ಇದೆ. ಇದು ಮಣ್ಣಿನ ರಸ್ತೆಯಾಗಿದ್ದು ರಾಷ್ಟ್ರೀಯ ಹೆದ್ದಾರಿಯವರು ಮಳೆ ಗಾಲದ ನೀರನ್ನು ಅಲ್ಲಲ್ಲಿ ಚರಂಡಿ ಮೂಲಕ ಸರ್ವಿಸ್‌ ರಸ್ತೆಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಶಾಲಾ ಮಕ್ಕಳು ಹಾಗೂ ವಾಹನ ತಿರುಗಾಡಲು ಕಷ್ಟವಾಗಿದ್ದು ರಿಕ್ಷಾ ಮತ್ತು ಇತರ ಸಣ್ಣ ವಾಹನಗಳು ಓಡಾಡುವುದೇ ಕಷ್ಟವಾಗಿರುತ್ತದೆ.

ಸರ್ವಿಸ್‌ ರಸ್ತೆಯ ಪಕ್ಕದಲ್ಲಿ ಪ್ರತಿಷ್ಠಿತ ಆದರ್ಶ ಆಸ್ಪತ್ರೆ ಮತ್ತು ಇಪ್ಪತ್ತಕ್ಕೂ ಹೆಚ್ಚು ಮನೆಗಳು ಕೂಡ ಇವೆ. ಸರ್ವಿಸ್‌ ರಸ್ತೆಯಿಂದ ಮುಂದೆ ಸಾಗಿದರೆ ರಿಂಗ್‌ ರಸ್ತೆ ಇದೆ. ಇಲ್ಲಿ ಖಾರ್ವಿ ಸಮಾಜದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಂಗಂ ಬಸ್ಸು ನಿಲ್ದಾಣ ಮತ್ತು ಬಿ.ಬಿ.ಹೆಗ್ಡೆ ಕಾಲೇಜು ಹತ್ತಿರವಿರುವುದರಿಂದ ಇದೇ ಸರ್ವಿಸ್‌ ರಸ್ತೆ ಮೂಲಕ ಜನ ಹೆಚ್ಚು ತಿರುಗಾಡುತ್ತಾರೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿರುವುದರಿಂದ ಐಆರ್‌ಬಿ ಕಂಪೆನಿಯವರಿಗೆ ಸೂಚಿಸಿ ಮಳೆಗಾಲ ಪ್ರಾರಂಭಕ್ಕಿಂತ ಮುಂಚೆ ಸರ್ವಿಸ್‌ ರಸ್ತೆ ಮತ್ತು ಚರಂಡಿ ರಚನೆ ಮಾಡುವಂತೆ ಸಲಹೆ ನೀಡಬೇಕೆಂದು ಮನವಿ ಮಾಡಲಾಯಿತು. ಸಂಸದರು ಇದಕ್ಕೆ ಸ್ಪಂದಿಸಿದ್ದು ಎರಡು ದಿನಗಳಲ್ಲಿ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಐಆರ್‌ಬಿಯವರು ಬಂದು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಪುರಸಭೆ ಸದಸ್ಯ ಸಂತೋಷ್‌ ಶೆಟ್ಟಿ, ಬಿಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯ ಅರುಣ್‌ ಕುಮಾರ್‌ ಬಾಣ, ಜಿಲ್ಲಾ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್‌ರಾಜ್‌ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್‌ ಸದಸ್ಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next