Advertisement

ಅತಿಥಿ ಉಪನ್ಯಾಸಕರಿಂದ ಮನವಿ

04:50 AM May 12, 2020 | Suhan S |

ಬನಹಟ್ಟಿ: ಲಾಕ್‌ಡೌನ್‌ ಜಾರಿಯಿಂದ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬದುಕು ಚಿಂತಾಜನಕವಾಗಿದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಖಾಸಗಿ ಶಾಲಾ-ಕಾಲೇಜುಗಳ ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

Advertisement

ಶಾಸಕ ಸಿದ್ದು ಸವದಿ ನಿವಾಸಕ್ಕೆ ತೆರಳಿದ ಅತಿಥಿ ಉಪನ್ಯಾಸಕರು 5 ತಿಂಗಳ ಗೌರವಧನ ಹಾಗೂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ| ಎಸ್‌.ಡಿ. ಸರಿಕರ, ಪಿ.ಕೆ. ಮಾಸ್ತಿ, ಆರ್‌.ಡಿ. ಬೀಳಗಿ, ಧರ್ಮಣ್ಣ ಕಾಂಬಳೆ, ಶ್ರೀಶೈಲ ಬಾಗೇವಾಡಿ, ರವೀಂದ್ರ ಹಾರೂಗೇರಿ, ವಿನೋದ ಗಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next