ಕೋಲಾರ: “ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ’, ರೈತ ವಿರೋಧಿ ಕಾಯ್ದೆ ಕೂಡಲೇ ವಾಪಸ್ ಪಡೆಯಲು ಒತ್ತಾಯಿಸಿ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಡೀಸಿ ಮೂಲಕ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿತು. ದೆಹಲಿಯ ಗಡಿಯಲ್ಲಿ ರೈತರು
ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳು ಪೂರೈಸಿದ್ದಕ್ಕಾಗಿ ಮತ್ತು ಈ ದೇಶದಲ್ಲಿ ತುರ್ತು ಪರಿ ಸ್ಥಿತಿಯ 47ನೇ ವಾರ್ಷಿಕೋತ್ಸವದಂದು ಕೃಷಿಯನ್ನು ಉಳಿಸುವ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಸವಾಲಿನ ಬಗ್ಗೆ ಪ್ರಧಾನಿಗೆ ಪತ್ರವನ್ನು ಬರೆಯುತ್ತಿದ್ದೇವೆ ಎಂದುಕಾರ್ಯಕರ್ತರು ವಿವರಿಸಿದರು.
ಮೊದಲು 33 ಕೋಟಿ ನಾಗರಿಕರಿಗೆ ಆಹಾರ ನೀಡುತ್ತಿದ್ದೆವು. ಇಂದು ಅದಕ್ಕಿಂತ ಕಡಿಮೆ ಪ್ರಮಾಣದ ಭೂಮಿಯಲ್ಲಿ 140 ಕೋಟಿ ಭಾರತೀಯರಿಗೆ ಆಹಾರ ಪೂರೈಸುತ್ತಿದ್ದೇವೆ. ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿಆರ್ಥಿಕತೆಯ ಇತರ ಕ್ಷೇತ್ರಗಳು ಕ್ಷೀಣಿಸಿದವುಮತ್ತು ಕುಸಿದವು. ಆದರೂ, ರೈತರು ಕೃಷಿಯಲ್ಲಿದಾಖಲೆಯ ಉತ್ಪಾದನೆಯನ್ನು ಸಾಧಿಸಿದ್ದೇವೆ.ಜೀವನವನ್ನೇ ಪಣಕ್ಕಿಟ್ಟುಧಾನ್ಯ ಗೋದಾಮುಗಳಲ್ಲಿ ತುಂಬಿರುವುದನ್ನು ಖಾತ್ರಿಪಡಿಸಿದ್ದೇವೆ ಎಂದು ಹೇಳಿದರು.
ಮನವಿ ಸ್ವೀಕರಿಸಿಲ್ಲ: ದೆಹಲಿಯ ಗಡಿಯಲ್ಲಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಏಳು ತಿಂಗಳು ಪೂರೈಸಿದೆ. ಈ ಹೋರಾಟದಲ್ಲಿ 500 ರೈತರು ಪ್ರಾಣ ಕ ಳೆದುಕೊಂಡಿದ್ದಾರೆ. ಮಳೆ, ಗಾಳಿ ಬಿಸಿಲೆನ್ನೆದೆ ಹಲವು ರೈತರುಕಾಯಿಲೆಗಳಿಂದ ಬಳಲುತ್ತಿದ್ದರೂ, ಪ್ರಧಾನಿ ಪ್ರತಿಭಟನೆ ಸ್ಥಳಕ್ಕೆ ತೆರಳಿ ಮನವಿ ಸ್ವೀಕ ರಿಸಿಲ್ಲ ಎಂದು ದೂರಿದರು.
ಎಚ್ಚರಿಕೆ ಪತ್ರ ರವಾನೆ: ಕಾರ್ಪೊರೇಟ್ ವಲಯದ ಪರವಾಗಿ ನಿಂತು ರೈತ ವಿರೋಧಿ ಕಾಯ್ದೆ ಜಾರಿ ಮಾಡಿರುವುದು ಮಾರಕವಾಗಿದೆ. ಈಗಲಾದರೂ ತಮ್ಮ ತಪ್ಪುಗಳನ್ನು ಅರಿತು, ಭೂ ಸ್ವಾಧೀನ, ಕೆಪಿಟಿಸಿಎಲ್, ಎಪಿಎಂಸಿ ತಿದ್ದುಪಡಿ, ಇನ್ನೂ ಹಲವು ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆದು, ರೈತ ಪರ ಸರ್ಕಾರ ಎಂಬುದನ್ನು ಸಾಬೀತುಪಡಿಸಿ, ಇಲ್ಲವಾದರೆ ರೈತವಿರೋಧಿ ಸರ್ಕಾರ ಎಂದು ಭಾವಿಸಿ ಮುಂದಿನದಿನಗಳಲ್ಲಿ ತಮ್ಮ ತಕ್ಕ ಉತ್ತರವನ್ನು ದೇಶದ ರೈತರು,ಪ್ರಜೆಗಳು ನೀಡಲಿದ್ದಾರೆ ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಇತರರು ಹಾಜರಿದ್ದರು.