ತುಮಕೂರು: ನಗರದಲ್ಲಿ ಬಿಜಿಎಸ್ ವೃತ್ತದಲ್ಲಿರುವ ಉದ್ಯಾನವನದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡುವಂತೆ ಕೋರಿ ಶುಕ್ರವಾರ ನಗರಪಾಲಿಕೆಯ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಿಶಿಕಲಾ ಅವರಿಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮನವಿ ಸಲ್ಲಿಸಿದರು.
ನಗರಪಾಲಿಕೆಯ ಸದಸ್ಯರು ಹಾಗೂ ಪಕ್ಷದ ಮುಖಂಡರೊಂದಿಗೆ ಪಾಲಿಕೆಯ ಮೇಯರ್ ಅವರ ಕಚೇರಿಗೆ ಆಗಮಿಸಿದ ಶಾಸಕ ಡಿ.ಸಿ.ಗೌರಿಶಂಕರ್, ದೇಶದಲ್ಲಿ ಅತ್ಯಂತ ಸುರಕ್ಷಿತ ಸ್ಥಳವಾಗಿರುವ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶನಿವಾರ ಅತ್ಯಂತ ವಿಜೃಂಭಣೆ ಆಚರಿಸಲಾಗುತ್ತಿದೆ.
ರಾಜಧಾನಿಗೆ ಹತ್ತಿರದಲ್ಲಿರುವ ತುಮಕೂರು ನಗರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಮೂಲಕ ಅವರ ಜಾತ್ಯತೀತ ಸೇವೆಯನ್ನು ತುಮಕೂರು ಜಿಲ್ಲೆಯ ಜನರು ಸ್ಮರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಕೆಂಪೇಗೌಡ ಪ್ರತಿಮೆ ಆನಾವರಣಗೊಳಿ ಸಬೇಕೆಂಬುದು ಜನಾಂಗದ ಮುಖಂಡರ ತೀರ್ಮಾನವಾಗಿದ್ದು, ಈ ನಿಟ್ಟಿನಲ್ಲಿ ನಗರಪಾಲಿಕೆಯ ಆವರಣದಲ್ಲಿರುವ ಉದ್ಯಾನವನದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮೇಯರ್ ಫರೀದಾಬೇಗಂ, ಜುಲೈನಲ್ಲಿ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ, ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಜಾಗ ಗೊತ್ತು ಮಾಡಿ ತಿಳಿಸಲಾಗುವುದು ಎಂದರು. ಈ ವೇಳೆ ಮಾತನಾಡಿದ ಶಾಸಕರು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯ ಮಾದರಿಯಲ್ಲಿ ತುಮಕೂರಿನಲ್ಲೂ ಪ್ರತಿಮೆ ಸ್ಥಾಪಿಸಲು ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದು, ಅವಕಾಶ ಸಿಕ್ಕ ನಂತರ ಪ್ರತಿಮೆ ಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸ ಲಾಗುವುದು ಎಂದರು.
ಪಾಲಿಕೆ ಸದಸ್ಯರಾದ ಮಂಜು ನಾಥ್, ಧರಣೇಂದ್ರಕುಮಾರ್, ಕುಮಾರ್, ಮನು, ಮುಖಂಡರಾದ ಹಾಲನೂರುಆನಂತ್ ಕುಮಾರ್, ವೆಂಕಟೇಶಗೌಡ, ಯೋಗೀಶ್ ಗೌಡ ಇದ್ದರು.