Advertisement

ನಿಯಮಿತ ವೇತನ ಪಾವತಿಗೆ ಆಗ್ರಹಿಸಿ ಮನವಿ

11:21 AM Nov 26, 2019 | Suhan S |

ಹರಿಹರ: ಪ್ರತಿ ತಿಂಗಳು ನಿಯಮಿತವಾಗಿ ವೇತನ ನೀಡಲು ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ನಗರದಲ್ಲಿ ಸೋಮವಾರ ತಹಶೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪಗೆ ಮನವಿ ಸಲ್ಲಿಸಲಾಯಿತು.

Advertisement

ಸಂಘದ ತಾಲೂಕು ಅಧ್ಯಕ್ಷ ಎಂ.ಉಮಣ್ಣ ಮಾತನಾಡಿ, ಆರೋಗ್ಯ ಸಹಾಯಕ ವೃಂದದವರಿಗೆ ರಾಜ್ಯದಲ್ಲಿ 3 ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸಾಲ, ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ. ಮಕ್ಕಳ ಶಾಲಾ ಶುಲ್ಕ ಪಾವತಿ, ದಿನಸಿ ಅಂಗಡಿ ಖರೀದಿ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ನೀಡಲು ಈ ಹಿಂದೆ ಆರೋಗ್ಯ ಇಲಾಖೆ ನಿರ್ದೇಶಕರು, ಸರಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ರಾಜ್ಯ ಮಟ್ಟದ ಅಧಿ ಕಾರಿಗಳಿಗೆ ಈ ಹಿಂದೆ ಮನವಿ ನೀಡಲಾಗಿದೆ. ಆದರೂ ಕೂಡ ಆರೋಗ್ಯ ಸಹಾಯಕರು ವೇತನಕ್ಕಾಗಿ ಪರದಾಡುವುದು ತಪ್ಪಿಲ್ಲ. ಸಾರ್ವಜನಿಕರಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಸಹಾಯಕರ ಆರೋಗ್ಯವೇ ಹದಗೆಟ್ಟಿದೆ ಎಂದರು.

ಮನವಿಗೆ ಓಗೊಡದ ಸರಕಾರದ ಕಣ್ಣು ತೆರೆಸಲು ಸಂಘದ ಕೇಂದ್ರ ಸಭೆಯ ನಿರ್ಣಯದಂತೆ ಈ ತಿಂಗಳಿಂದ ರಾಷ್ಟ್ರೀಯ ಕಾರ್ಯಕ್ರಮಗಳ ವರದಿಯನ್ನು ಇಲಾಖೆಗೆ ಸಲ್ಲಿಸುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ. ಡಿಸೆಂಬರ್‌ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳ ವರದಿ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌  ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಆರೋಗ್ಯ ಸಹಾಯಕರ ಸಂಘದ ಪದಾಧಿಕಾರಿಗಳಾದ ಎಂ.ಬಿ.ಮಂಜುನಾಥ್‌, ಗೋವಿಂದಪ್ಪ, ಆದರ್ಶ, ಕಿರಣ್‌, ವಿಜಯ ವಿಠಲ, ಸಾವಿತ್ರಮ್ಮ, ಕಾರ್ಲಿನಾ, ಸುಧಾ, ಕೋಕಿಲಾ ವಾಣಿ, ವಿಮಲ, ಶೀಲ, ಪೂಜಾ, ರೇಖಾ, ಪರಶುರಾಮ, ಮಹೇಶ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next