Advertisement
ಪಟ್ಟಣದ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಋಣಮುಕ್ತ ಹೋರಾಟ ಸಮಿತಿ ಮುಖಂಡ ಮಂಗಳೂರಿನ ಎ.ಬಿ. ಭಟ್ ಮಾತನಾಡಿ, ಬಡ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಸಾಲ ವಸೂಲಿಗಾರರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಪೊಲೀಸರ ಮಧ್ಯ ಪ್ರವೇಶ: ಹೋರಾಟ ಸಮಿತಿ ಮುಖಂಡರು ಹಾಗೂ ಫೈನಾನ್ಸ್ ಮಾಲೀಕರ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ವೇಳೆ ಯುವಕರ ಗುಂಪು ಹೋರಾಟ ಸಮಿತಿ ಪರವಾಗಿ ಧ್ವನಿ ಎತ್ತಿದ್ದ ರಿಂದ ಸ್ಥಳದಲ್ಲಿ ಬಿಗುವಿನ ವಾತವಾರಣ ಸೃಷ್ಟಿಯಾಗಿತ್ತು. ಆಗ ಸ್ಥಳಕ್ಕೆ ಬಂದ ಪೊಲೀಸರು ಫೈನಾನ್ಸ್ ಮಾಲೀಕರನ್ನು ಸಭೆಯಿಂದ ಹೊರಕಳುಹಿ ಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
ಮಹಿಳೆಯ ಆಕ್ರೋಶ: ಸಭೆಗೆ ಬಂದಿದ್ದ ಮಹಿಳೆಯರ ಗುಂಪು ಫೈನಾನ್ಸ್ ಮಾಲೀಕರ ಪರ ಧ್ವನಿ ಎತ್ತಿ ಕಷ್ಟ ಕಾಲದಲ್ಲಿ ಹಣ ಒದಗಿಸುವ ಮೈಕ್ರೋ ಫೈನಾನ್ಸ್‌ಗಳ ಅವಶ್ಯಕತೆ ನಮಗಿದೆ. ಸುಳ್ಳು ಹೇಳಿ ಸಭೆಗೆ ಕರೆಸಿ ಇಲ್ಲಸಲ್ಲದ ಸುಳ್ಳು ಹೇಳುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ, ಹೋರಾಟ ಸಮಿತಿ ಮುಖಂಡರೇ ಭಾಷಣದಲ್ಲಿ ಹೇಳಿದಂತೆ ಸಭೆಗೆ ಬಂದಿರುವ ಬಡ ಮಹಿಳೆಯರಿಗೆ ಬ್ಯಾಂಕ್‌ನಲ್ಲಿ ಸಾಲ ಕೊಡಿಸಲಿ ನಂತರ ಮೈಕ್ರೋ ಫೈನಾನ್ಸ್ ವಿರುದ್ಧ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ವಾದ –ಪ್ರತಿವಾದ: ಇದಕ್ಕೆ ಪ್ರತಿರೋಧವಾಗಿ ಮೈಕ್ರೋ ಫೈನಾನ್ಸ್‌ಗಳ ಕನಿಷ್ಠ ಮಾನವೀಯತೆ ಮೈಗೂಡಿಸಿಕೊಂಡಿರಬೇಕು. ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದರು ಸಹ ಈ ಫೈನಾನ್ಸ್‌ನವರು ಹಣ ಕಟ್ಟಲು ಒತ್ತಾಯಿಸುತ್ತಾರೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಆದ್ದರಿಂದ ಮೈಕ್ರೋ ಫೈನಾನ್ಸ್ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕೆಲವು ಮಹಿಳೆಯರು ಹೇಳಿದರು. ಇದರಿಂದ ಸಭೆ ಗೊಂದಲದ ಗೊಡಾಗಿದ್ದಲ್ಲದೆ ಒಬ್ಬರ ಮಾತು ಒಬ್ಬರಿಗೆ ಕೇಳದಂತಾಯಿತು.
ತಾಲೂಕು ಋಣಮುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ ಹರೀಶ್, ಅಧ್ಯಕ್ಷೆ ಭಾಗಿರಥಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸಹ ಕಾರ್ಯದಶಿ ವಿಲಿಯಂ ಬಾಬು ಇತರರು ಇದ್ದರು.