ಪತ್ತಿನ ಸಹಕಾರ ಸಂಘ(ನಿ) ಇವರಿಂದ ಪಟ್ಟಣದ ತಹಶೀಲ್ದಾರ ಮೂಲಕ ಸಹಕಾರಿ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
Advertisement
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಅಧ್ಯಕ್ಷ ನಂದಿವಿರೂಪಾಕ್ಷಿ ಮಾತನಾಡಿ, ಈಗಾಗಲೇ 2018-19ನೇ ಸಾಲಿನಲ್ಲಿ ಸಹಕಾರಿ ಸಂಘಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಅಲ್ಪಾವಧಿ ಸಾಲ ಮನ್ನಾ ಎಂದು ತಿಳಿಸಿದ್ದರು. ಆದರೆ ಅಂದಿನ ಸರ್ಕಾರ ಪ್ರತಿ ಕುಟುಂಬದ ಸಹಾಕಾರಿ ಸಂಘದಿಂದ ಪಡೆದ ಸಾಲದ ಒಂದು ಲಕ್ಷದವರೆಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ಎರಡು ಲಕ್ಷದವರೆಗೆ 2018 ಜುಲೈ 31ಕ್ಕೆ ಪುರ್ವನ್ವವಾಗುವಂತೆ ಸಾಲಮನ್ನಾ ಆದೇಶ ಪ್ರಕಟಗೊಂಡಿತ್ತು. ಆ ಹಿನ್ನೆಲೆಯಲ್ಲಿ ರೈತರು ಸಾಲ ಮನ್ನಾ ಸೌಲಭ್ಯ ಪಡೆದಿದ್ದರು. ಕೆಲವೊಂದು ಆರ್ಹ ಫಲಾನುಭವಿಗಳು ಸಹಕಾರಿ ಸಂಘದಿಂದ ಪಡೆದ ಸಾಲಗಳು ಮನ್ನಾ ಆಗಿರುವುದಿಲ್ಲ. ಕಾರಣ ಕೇಳಿದರೆ ಏನಾದರೂ ಒಂದು ಬೇಜವಾªಬಾರಿ ಉತ್ತರವೆಂಬತೆ ನೀಡುತ್ತಿದ್ದಾರೆ. ಇತ್ತ ಸಣ್ಣಪುಟ್ಟ ತಾಂತ್ರಿಕ ದೋಷಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಸಾಲಮನ್ನಾ ಆಗಿರುವುದಿಲ್ಲ ಎಂಬುವುದು ರೈತರ ಅಳಲಾಗಿದೆ ಎಂದು ತಿಳಿಸಿದರು.
ನಾಗರಾಜ, ಹೂಲೆಪ್ಪ, ಮಂಜು ಬಸವರಾಜ, ಬಂಗಾರಪ್ಪ ಇದ್ದರು.