Advertisement

ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿ ಮನವಿ

03:40 PM Aug 09, 2020 | Suhan S |

ಕೂಡ್ಲಿಗಿ: ಕೋವಿಡ್ ದಿಂದ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಶಾಲಾ ಕಾಲೇಜು ಶುಲ್ಕವನ್ನು ಕಡಿತಗೊಳಿವುದರ ಜೊತೆಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ನ ತಾಲೂಕು ಘಟಕ ಪದಾಧಿ ಕಾರಿಗಳು ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಕೋವಿಡ್ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ಅನೇಕ ದಿನಗಳ ಕಾಲ ಲೌಕ್‌ಡೌನ್‌ ಮಾಡಲಾಗಿತ್ತು. ಇದರಿಂದ ಕೆಳ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಶಾಲಾ, ಕಾಲೇಜುಗಳು ಆರಂಭವಾಗುವುದು ಇನ್ನೂ ವಿಳಂಬವಾಗುತ್ತಿದೆ. ಆದರೂ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಹಾಗೂ ಪರೀಕ್ಷೆ ಶುಲ್ಕ ಕಟ್ಟಬೇಕಾಗಿದೆ. ಅದ್ದರಿಂದ ವಿದ್ಯಾರ್ಥಿಗಳು ಭರಸಬೇಕಾಗಿರುವ ಶುಲ್ಕವನ್ನು ಅರ್ಧದಷ್ಟು ಕಡಿತಗೊಳಿಸಿ, ವಿದ್ಯಾರ್ಥಿಗಳಿಗೆ ಬರಬೇಕಾಗಿರುವ ಈ ವರ್ಷದ ವಿದ್ಯಾರ್ಥಿ ವೇನತವನ್ನು ತಕ್ಷಣ ಮಂಜೂರು ಮಾಡಬೇಕು. ಇದರೊಂದಿಗೆ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ. ‌

ಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಮನವಿ ಪತ್ರ ಸ್ವಿಕರಿಸಿದರು. ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಎಂ. ಮಂಜುನಾಥ, ಉಪಾಧ್ಯಕ್ಷ ಜಿ.ಎಸ್‌. ಸತೀಶ್‌, ಸಂಚಾಲಕ ಜಿ. ಶಶಾಂಕ, ಸದಸ್ಯರಾದ ಕಲ್ಲೇಶ್‌, ಅಶೋಕ, ಶಮಂತ, ಕೊಟ್ರೇಶ್‌ ನಾಯ್ಕ, ಪ್ರದೀಪ್‌, ಅಕ್ಷಯಕುಮಾರ್‌, ಅಜಯ, ಪ್ರವಿಣ್‌ ಕುಮಾರ್‌, ಅಂಜಿನಪ್ಪ, ನರೇಶ್‌, ನಿಕಿಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next