ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದ ಪ್ರವಾಹದಿಂದ ಕಾವೇರಿ ನದಿ ತೀರದ ಪ್ರದೇಶದಲ್ಲಿ ಮನೆಗಳು ಹಾಗೂ ಆಸ್ತಿಪಾಸ್ತಿ, ಬೆಳೆ ಹಾನಿಗ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂಸದೆ ಸುಮಲತಾ ಸಂತ್ರಸ್ತರಿ ಪರಿಹಾರ ಒದಗಿಸಲು ಸರ್ಕಾರಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ತಹಶೀಲ್ದಾರ್ ಡಿ.ನಾಗೇಶ್ ಅವರಿಂದ ನಷ್ಟಕ್ಕೊಳ ಗಾದ ಸಂತ್ರಸ್ತರನ್ನು ಗುರುತಿಸಿ ಕೂಡಲೇ ಪರಿಹಾರಕ್ಕೆ ವರದಿ ತಯಾರಿಸುವಂತೆ ಸೂಚಿಸಿದರು.
ಕಾವೇರಿ ಉಕ್ಕಿ ಹರಿದ ಪ್ರವಾಹದಲ್ಲಿ ಪಟ್ಟಣ ಪುರಸಭಾ ವ್ಯಾಪ್ತಿಯ ನದಿ ತೀರದ 80 ಎಕರೆ ಕಬ್ಬು, 80 ಎಕರೆ ಭತ್ತ, 40 ಎಕರೆ ತೋಟಗಾರಿಕೆ ಬೆಳೆಗಳು ನಾಶವಾ ಗಿವೆ. 11 ಮನೆಗಳು ಕುಸಿದಿವೆ. 2 ಜಾನುವಾರು ನೀರಲ್ಲಿ ಕೊಚ್ಚಿ ಹೋಗಿವೆ. ಈ ಕುರಿತು ಈಗಾಗಲೇ ವರದಿ ತಯಾರಿಸಿ ಪರಿಹಾರಕ್ಕೆ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಹಶೀಲ್ದಾರ್ ಡಿ.ನಾಗೇಶ್ ಸಂಸದರಿಗೆ ಮಾಹಿತಿ ನೀಡಿದರು.
ಬಳಿಕ ಪಾರಂಪರಿಕ ವೆಲ್ಲೆಸ್ಲಿ ಸೇತುವೆ ಬಳಿ ಪ್ರವಾಹಕ್ಕೆ ಸಿಲುಕಿದ್ದ ತಡೆಗೋಡೆ, ಚಪ್ಪಡಿಗಳು ಜಖಂ ಗೊಂಡಿರುವುದು, ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಬಳಿ ನೆರೆ ಹಾವಳಿಗೆ ತುತ್ತಾಗಿದ್ದ ಕಬ್ಬು ಇತರೆ ಬೆಳೆಗಳನ್ನು ಸಂಸದರು ವೀಕ್ಷಿಸಿದರು. ತಾಪಂ ಇಒ ಅರುಣ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರಾದ ಎಸ್. ಎಲ್.ಲಿಂಗರಾಜು, ಸಚಿದಾ ನಂದ, ಮದನ್‌ಕುಮಾರ್, ಬೇಲೂ ರು ಸೋಮಶೇಖರ್ ಇತರರು ಉಪಸ್ಥಿತರಿದ್ದರು.