Advertisement

ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ಮನವಿ

12:07 PM Oct 23, 2019 | Team Udayavani |

ಭಟ್ಕಳ: ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರುವುದಕ್ಕಾಗಿ ದೇಶದಾದ್ಯಂತ ಸಮಾನ ನಾಗರಿಕ ಕಾನೂನು ಜಾರಿಗೊಳಿಸುವಂತೆ ಪ್ರಧಾನ ಮಂತ್ರಿಗಳಿಗೆ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.

Advertisement

ದೆಹಲಿ ವಿವಿದಲ್ಲಿ ಸ್ವಾತಂತ್ರವೀರ ಸಾವರ್ಕರ್‌ ಪ್ರತಿಮೆಗೆ ಅಪಮಾನ ಮಾಡಿದ ಅಕ್ಷಯ್‌ ಲಕಡಾನನ್ನು ಬಂಧಿಸಬೇಕು ಮತ್ತು ರಾಷ್ಟ್ರ ಪುರುಷರಿಗೆ ಆಗುವ ಅನಾದರವನ್ನು ತಡೆಗಟ್ಟಲು ಕಾನೂನು ರೂಪಿಸುವುದು. ಹಿಂದೂ ಮಂದಿರಗಳ ಮೇಲೆ ಆಂಧ್ರಪ್ರದೇಶ ಸರಕಾರದ ವತಿಯಿಂದ ಆಗುತ್ತಿರುವ ಧಾರ್ಮಿಕ ಆಕ್ರಮಣಗಳ ವಿಷಯದಲ್ಲಿ ಸಮಂಜಸವಾದ ಕಾರ್ಯಾಚರಣೆ ಮಾಡಬೇಕು. ಒಡಿಶಾದ ಪುರಿ ಜಗನ್ನಾಥ ಮಂದಿರದ ಸುರಕ್ಷತೆ ದೃಷ್ಟಿಯಿಂದ ಅದರ ಸುತ್ತಲಿನ ಪ್ರಾಚೀನ ಮಠ ಮತ್ತು ಮಂದಿರಗಳನ್ನು ಅಕ್ರಮ ಕಟ್ಟಡಗಳು ಎಂದು ತೆರವುಗೊಳಿಸುತ್ತಿರುವುದನ್ನು ನಿಲ್ಲಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಮಚಂದ್ರ ನಾಯ್ಕ, ಉಲ್ಲಾಸ ಪ್ರಭು, ಮಂಜುನಾಥ ನಾಯ್ಕ, ಆನಂದ ದೇವಾಡಿಗ, ಅಂಜನಿ ಪೈ, ಗಣಪತಿ ಮೊಗೇರ, ಕೋಮಲ ಮೊಗೇರ, ಪುಂಡಲೀಕ ಪೈ, ರಾಮಾ ನಾಯ್ಕ, ಗಂಗಾ ಮೊಗೇರ, ಶಕುಂತಲಾ ನಾಯ್ಕ, ದಯಾನಂದ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next