ದೇವರಹಿಪ್ಪರಗಿ: ಗ್ರಾಮದ ಎಂಎಸ್ ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದು ಪಡಿಸಿ, ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಮಹಿಳೆಯರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ತಾಲೂಕಿನ ಮುಳಸಾವಳಗಿ ಗ್ರಾಮದ ನೂರಾರು ಮಹಿಳೆಯರು ಪಟ್ಟಣಕ್ಕೆ ಆಗಮಿಸಿ ಶಾಸಕರನ್ನು ಕಂಡು ಮದ್ಯದ ಅಂಗಡಿ ರದ್ದುಪಡಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಮನವ್ವ ತಳವಾರ, ಸುಸಲವ್ವ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ಪ್ರತಿ ಕುಟುಂಬದಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಮದ್ಯದ ಅಂಗಡಿಯವರು ಕುಡಿ ಯುವವರು ಫೋನ್ ಮಾಡುವುದೇ ತಡ ಮನೆಗೆ ಮದ್ಯ ಪೂರೈಸುತ್ತಿದ್ದಾರೆ. ಇದು ಯುವಕರು ಮದ್ಯದ ಕಡೆಗೆ ಸೆಳೆಯಲು ಕಾರಣವಾಗಿದೆ. ಕಳೆದ ವರ್ಷ ಯುವಕನೊಬ್ಬ ಕುಡಿದು ಅಂಗಡಿಯ ಮುಂದೆಯೇ ಮೃತಪಟ್ಟ ಘಟನೆ ಜರುಗಿದೆ.
ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಸಾರಾಯಿ ಮಾರಾಟಕ್ಕೆ ಮುಂದಾಗುವ ಅಂಗಡಿಯಿಂದ ಬಡ ಕುಟುಂಬಗಳ ಗಂಡಸರು ತಾವು ದುಡಿದ ಹಣವನೆಲ್ಲ ಕುಡಿತಕ್ಕೆ ಖರ್ಚು ಮಾಡಿದ್ದು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಹಸಿವೆಯಲ್ಲಿ ಕಾಲ ಕಳೆಯುವಂತಾಗಿದೆ. ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲು ಇಟ್ಟ ಹಣವನ್ನು ಗಂಡಂದಿರು ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ನಾವು ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದು, ಕೂಡಲೇ ನಮ್ಮ ಕುಟುಂಬಗಳಿಗೆ ಕಂಟಕವಾದ ಸರ್ಕಾರಿ ಮದ್ಯದ ಅಂಗಡಿ ಪರವಾನಗಿಯನ್ನು ಕೂಡಲೇ ರದ್ದು ಪಡಿಸಿ ಗ್ರಾಮದಿಂದ ತೆರವುಗೊಳಿಸಬೇಕು ಎಂದು ಶಾಸಕರಲ್ಲಿ ಕಣ್ಣಿರಿಟ್ಟರು.
ಒಂದು ವೇಳೆ ನಿಮಗೆ ಕ್ರಮ ಕೈಗೊಳ್ಳಲು ಆಗದಿದ್ದಲ್ಲಿ ನಮಗೆ ವಿಷವಾದರೂ ನೀಡಿ ಎಂದು ಗೋಗರೆದರು. ಶೋಭಿತಾ ನಾಯೊRàಡಿ, ಪಾರ್ವತಿ ಹಿಟ್ನಳ್ಳಿ, ಸಾಬವ್ವ ಗೊಬ್ಬೂರ, ನೀಲಮ್ಮ ತಳವಾರ, ಶೋಭಾ ತಳವಾರ, ಶಾಂತಾಬಾಯಿ ಸಾಲೋಟಗಿ, ಸರೂಬಾಯಿ ದ್ಯಾಬೇರಿ, ಶಾರದಾ ಮಾದರ, ಬಾಳವ್ವ ನಾಗಠಾಣ, ದಾನಮ್ಮ ಗುಡ್ನಳ್ಳಿ, ಭೋರಮ್ಮ ರೂಗಿ, ತಿಪ್ಪವ್ವ ನಾಯೊRàಡಿ, ಮಹಾದೇವಿ ತಳವಾರ, ಸತ್ಯಮ್ಮ ನಾಯೊRàಡಿ, ಲಕ್ಷ್ಮೀಬಾಯಿ ದ್ಯಾಬೇರಿ, ಮಲ್ಲಮ್ಮ ತಳವಾರ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಇದ್ದರು