Advertisement

ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಮನವಿ

08:53 AM Jul 22, 2020 | Suhan S |

ಚನ್ನಮ್ಮ ಕಿತ್ತೂರು: ನೀರು, ದಿನಸಿ, ದಿನನಿತ್ಯದ ಮೂಲಭೂತ ಸೌಕರ್ಯಗಳನ್ನು ಒದಗಿಸದ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಕಿತ್ತೂರಿನ ಸಿಲ್‌ ಡೌನ್‌ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿದರು.

Advertisement

ಕಿತ್ತೂರಿನ ರಾವಳ ಓಣಿಯಲ್ಲಿ ಇತ್ತೀಚೆಗೆ ಎರಡು ಕೋವಿಡ್‌ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರದೇಶವನ್ನು ಅಧಿಕಾರಿಗಳು ಸೀಲ್‌ ಡೌನ್‌ ಮಾಡಿದ್ದರೂ ಕಳೆದ ನಾಲ್ಕು ದಿನಗಳಿಂದ ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ದಿನಸಿ, ಹಸುಗಳಿಗೆ ಮೇವು ಸೇರಿದಂತೆ ಅವಶ್ಯ ಇರುವ ಮೂಲಭೂತ ಸೌಕರ್ಯ ಒದಗಿಸದ ಕಾರಣ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಬಹಿರ್ದೆಸೆಗೆ ತೆರಳಲು ಸಹ ಪರದಾಡುವ ಸ್ಥಿತಿ ಬಂದೊದಗಿದೆ. ಇದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಹೀಗಾದರೆ ನಾವು ಇಲ್ಲಿ ಜೀವನ ಹೇಗೆ ನಡೆಸಬೇಕು. ಕಡು ಬಡವರು ಕೆಲಸವಿಲ್ಲದೆ, ಊಟವಿಲ್ಲದೆ ಪರದಾಡುತ್ತಿದ್ದಾರೆ. ಪಟ್ಟಣ ಪಂಚಾಯತಿ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶಾಸಕರು ನಮ್ಮ ಗೋಳು ಕೇಳಿ ಕನಿಷ್ಠ ಇಲ್ಲಿಯ ಬಡವರಿಗೆ ದಿನಸಿ ಕಿಟ್‌ ನೀಡಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಾಶ ಮಠದ, ಪ್ರತಿಭಟನಾ ನಿರತರ ಮನವೊಲಿಸಿ ಸರಕಾರದಿಂದ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next