Advertisement

ಸಂಗೀತ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಮನವಿ

02:53 PM Jan 04, 2020 | Suhan S |

ಚಿತ್ರದುರ್ಗ: ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಅಖೀಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ಹಾಗೂ ಚಿತ್ರದುರ್ಗ ಜಿಲ್ಲಾ ನಿರುದ್ಯೋಗಿ ಸಂಗೀತ ಪದವೀಧರರು ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ ಪಿ.ಟಿ. ತಿಪ್ಪೇಸ್ವಾಮಿ, ಸಂಗೀತದಿಂದ ಮಕ್ಕಳಲ್ಲಿ ಲವಲವಿಕೆ, ಸೃಜನಶೀಲತೆ, ಸಂಸ್ಕಾರ ಹಾಗೂ ಒಳ್ಳೆಯ ಮಾತುಗಾರಿಕೆ ಬರುತ್ತದೆ. ಉತ್ತಮ ಹಾಡುಗಾರರು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

2011ರಿಂದ ಸಂಗೀತ ವಿಷಯಕ್ಕೆ ಶಿಕ್ಷಕರನ್ನೇ ನೇಮಕ ಮಾಡಿಕೊಂಡಿಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶ್‌ಕುಮಾರ್‌ ದೊಡ್ಡ ಮನಸ್ಸು ಮಾಡಿ ರಾಜ್ಯದ ಪ್ರಾಥಮಿಕ, ಪ್ರೌಢ, ಮೊರಾರ್ಜಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕರ ನೇಮಕಕ್ಕೆ ಮುಂದಾಗಬೇಕು ಎಂದರು.

ಸಂಗೀತಗಾರರಾದ ಜಿ.ಸಿ. ಜಗದೀಶ್‌, ಕೆ.ಪಿ.ಎಂ ಗಣೇಶಯ್ಯ, ಎಸ್‌.ಜಿ ರಂಗಸ್ವಾಮಿ ಸಕ್ಕರ, ಡಿ. ಶ್ರೀಕುಮಾರ್‌, ಒ. ಮೂರ್ತಿ, ಅಂಜಿನಪ್ಪ, ಉಮೇಶ್‌ ಪತ್ತಾರ್‌, ಡಿ.ಬಿ. ನಿಂಗಪ್ಪ, ಗಂಗಾಧರ ಅಮ್ಮಕುಂದಿ, ಟಿ. ಮಧು, ಕಕ್ಕೇಹರವು ಮಂಜುನಾಥ್‌, ಶಿವಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next