Advertisement

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

06:32 AM Jul 11, 2020 | Lakshmi GovindaRaj |

ಕನಕಪುರ: ಭೂ ವ್ಯಾಜ್ಯದ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್‌ ಚಂದ್ರ ಮೌಳೇಶ್ವರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೋಳ್ಳಬೇಕು ಎಂದು ರಾಜ್ಯ  ಸರ್ಕಾರಿ ನೌಕರರ ಸಂಘ, ಸರ್ಕಾರವನ್ನು ಒತ್ತಾಯಿಸಿದೆ. ನಗರದ ತಾಲೂಕು ಕಚೇರಿ ಆವರಣದಲ್ಲಿ ಬಂಗಾರಪೇಟೆ ತಾಲೂಕಿನ ತಹಶೀ ಲ್ದಾರ್‌ ಹತ್ಯೆ ಖಂಡಿಸಿ ಸರ್ಕಾರಿ ನೌಕರರ ಸಂಘ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ ರಘುಗೆ  ಮನವಿ ಸಲ್ಲಿಸಿ ಸಂಘದ ಅಧ್ಯಕ್ಷ ನಂದೀಶ್‌ ಮಾತನಾಡಿದರು.

Advertisement

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವವರ ಭೂ ವ್ಯಾಜ್ಯದ ಹಿನ್ನೆಲೆ ಯಲ್ಲಿ ಪೊಲೀಸ್‌  ರಕ್ಷಣೆಯಲ್ಲಿ ಜಂಟಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭ ದಲ್ಲಿ ತಾಲೂಕಿನ ಪ್ರಥಮ ಪ್ರಜೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಹೇಯ ಕೃತ್ಯವನ್ನು ನಾಗರಿಕ ಸಮಾಜ ಮತ್ತು ಸರ್ಕಾರಿ ನೌಕರರ ಸಂಘ ತೀವ್ರವಾಗಿ  ಖಂಡಿಸುತ್ತದೆ ಎಂದರು.

ಸಾರ್ಕರಿ ನೌಕರರು ಆತಂಕವಿಲ್ಲದೆ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕೆಲವು ಕ್ರಮ ಕೈಗೊಳ್ಳಬೇಕು. ಜತೆಗೆ ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ಮರು ಕಳಿಸದ ಹಾಗೆ  ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಸಂಘದ ಉಪಾಧ್ಯಕ್ಷ ಶಿವಲಿಂಗೇಗೌಡ, ಸಂಘಟನೆ ಕಾರ್ಯದರ್ಶಿ ಚಂದ್ರೇಗೌಡ, ನಿರ್ದೇಶಕ ಚಂದ್ರಶೇಖರ್‌, ಶೇಖರ್‌, ಶಿಕ್ಷಕ ಪ್ರಸಾದ್‌, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ  ಸೇರಿದಂತೆ ಆನೇಕ ಸರ್ಕಾರಿ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next