Advertisement

ರಸ್ತೆ ದುರಸ್ತಿಗೆ ನೀರಲ್ಲೇ ನಿಂತು ಡಿಸಿಎಂಗೆ ಮನವಿ

08:39 AM Oct 23, 2019 | Suhan S |

ಮಹಾಲಿಂಗಪುರ: ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ಆಗ್ರಹಿಸಿ ನೀರಲ್ಲೇ ನಿಂತು ಬಾಲಕಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ವಿಡಿಯೋ ವೈರಲ್‌ ಆಗಿದೆ.

Advertisement

ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ರನ್ನಬೆಳಗಲಿ ಪಟ್ಟಣದ ಎಲ್ಲ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಪಟ್ಟಣದ 17ನೇ ವಾರ್ಡ್‌ ವ್ಯಾಪ್ತಿಯ ಕೋಡಿಹಾಳ ವಸತಿಯಲ್ಲಿನ ಮನೆ ಮತ್ತು ರಸ್ತೆಗಳುಜಲಾವೃತವಾಗಿವೆ. ಕೋಡಿಹಾಳ ನಿವಾಸಿ ಮಾಳಪ್ಪ ಮಠದ ಪುತ್ರಿ ಅನ್ನಪೂರ್ಣ, ಜಲಾವೃತಗೊಂಡ ರನ್ನಬೆಳಗಲಿ-ಚಿಮ್ಮಡ ರಸ್ತೆ ಜಲಾವೃತಗೊಂಡು ತೊಂದರೆಯಾದರೂ ಗಮನ ಹರಿಸುತ್ತಿಲ್ಲ ಎಂದು ಪುರಸಭೆ ಸದಸ್ಯರು, ಪಪಂ ಅಧಿಕಾರಿಗಳು, ಜಿಲ್ಲಾಧಿ ಕಾರಿಗಳು ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.

ಅಧಿಕಾರಿಗಳ ಭೇಟಿ: ಬಾಲಕಿ ವಿಡಿಯೋ ವೈರಲ್‌ ಆಗಿದ್ದರಿಂದ ಮುಧೋಳ ತಹಶೀಲ್ದಾರ್‌ ಸಂಜಯ ಇಂಗಳೆ, ರನ್ನಬೆಳಗಲಿ ಪಪಂ ಮುಖ್ಯಾಧಿಕಾರಿ ಶ್ರೀನಿವಾಸ ಜಾಧವ, ಮಹಾಲಿಂಗಪುರ ಠಾಣಾಧಿಕಾರಿ ಆರ್‌. ವೈ. ಬೀಳಗಿ ಕೋಡಿಹಾಳ ವಸತಿಯಲ್ಲಿನ ಚಿಮ್ಮಡ-ರನ್ನಬೆಳಗಲಿ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಯಲ್ಲಿ ನಿಂತ ನೀರು ಹರಿಯುವಂತೆ ವ್ಯವಸ್ಥೆ ಮಾಡಿ, ರಸ್ತೆಯ ಅಕ್ಕಪಕ್ಕದ ರೈತರು ಸಹಕಾರ ನೀಡಿದರೆ ಶೀಘ್ರ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು. ಪಪಂ ಸದಸ್ಯರು, ಗ್ರಾಮದ ಹಿರಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next