Advertisement

ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಸಿಎಂಗೆ ಮನವಿ

12:04 PM Aug 07, 2018 | |

ವಿಜಯಪುರ: ಸಮಸ್ಯೆಗಳ ಆಗರಗಳಾಗಿರುವ ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ
ಹೇಳಿದರು. ವಿಜಯಪುರ ತಾಲೂಕಿನ ಹಂಚನಾಳ ಎಲ್‌.ಟಿ. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಂಡಾಗಳಲ್ಲಿ ಇಂದಿಗೂ ಮೂಲಸೌಕರ್ಯಗಳಿಲ್ಲ.

Advertisement

ಲಂಬಾಣಿ ಸಮುದಾಯದಲ್ಲೇ ಹುಟ್ಟಿರುವ ನನಗೆ ನನ್ನ ಸಮುದಾಯದ ಸಮಸ್ಯೆಗಳ ಕುರಿತು ಸ್ಪಷ್ಟ ಅರಿವಿದ್ದು
ತಾಂಡಾಗಳಲ್ಲಿ ಬಂಜಾರಾರು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳಗೆ ಪರಿಹಾರ ಕಂಡುಕೊಡಬೇಕಿದೆ. ಸಿಎಂ
ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ಹಲವು ಗಂಭೀರ ವಿಚಾರಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿ ವಿಜಯಪುರ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಮನವಿ ಮಾಡುವುದಾಗಿ ಹೇಳಿದರು.

ನಾನು ನಾಯಕನಲ್ಲ, ನಿಮ್ಮ ಸೇವೆಯ ಕಾಯಕ ಮಾಡಲು ನಿಯೋಜಿತ ಜನಸೇವಕ ಮಾತ್ರ. ಹೀಗಾಗಿ ಕ್ಷೇತ್ರದ
ಸಮಗ್ರ ಅಭಿವೃದ್ಧಿಗೂ ಆದ್ಯತೆ ನೀಡಿ, ಕ್ಷೇತ್ರದ ಮತದಾರರು ನನ್ನ ಮೇಲೆ ಇರಿಸಿರುವ ವಿಶ್ವಾಸ ಗಳಿಸುತ್ತೇನೆ. ಕ್ಷೇತ್ರದಲ್ಲಿ ನಡೆಯುವ ಎಲ್ಲ ಯೋಜನೆಗಳ ಕಾಮಗಾರಿಗಳು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸರ್ಕಾರದಿಂದ ದೊರಕುವ ಸಾಲ ಸೌಲಭ್ಯ, ಸ್ವ-ಉದ್ಯೋಗ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳ
ಪ್ರಯೋಜನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
 
ಯುವ ಪಡೆ ಸದಸ್ಯರಾದ ಕಿರಣ ನಾಥು ರಾಠೊಡ, ಮೋಹನ ಶಂಕರ ರಾಠೊಡ, ರವಿ ರಾಠೊಡ, ಶ್ರೀಮಂತ
ಚವ್ಹಾಣ, ಆನಂದ ಹರಸಿಂಗ್‌ ರಾಠೊಡ, ಬಾಳು ರಾಠೊಡ, ಹರಸಿಂಗ್‌ ನಾಯಕ, ಪಾಂಡುರಂಗ ಚವ್ಹಾಣ, ಅರವಿಂದ
ಪೈಲ್ವಾನ, ಕಾಶೀನಾಥ ರಾಠೊಡ, ಚಂದು ಕೇಸು ರಾಠೊಡ, ವಿಜಯ ರಾಠೊಡ, ಮೋಹನ ರಾಠೊಡ, ಗುರು ರಾಠೊಡ,
ಅಶೋಕ ಡಿಜೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next