Advertisement

ಮಸ್ತಕಾಭಿಷೇಕದ ವಸ್ತುಪ್ರದರ್ಶನಕ್ಕೆ ನೆರವು ಕೋರಿಕೆ

11:47 AM Jul 14, 2017 | |

ಮೈಸೂರು: 2018 ರ ಫೆಬ್ರವರಿ 17 ರಿಂದ 25 ರವರೆಗೆ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಬಾಹುಬಲಿ ಮಹಾ ಮಸ್ತಕಾಭಿಷೇಕ ಮಹೋತ್ಸವ ಸಂದ
ರ್ಭದಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಆಯೋಜಿಸಲು ನೆರವು ನೀಡುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲ ಸೀತಾರಾಮನ್‌ರಿಗೆ ಮನವಿ ಮಾಡಲಾಯಿತು.

Advertisement

ಮಸ್ತಕಾಭಿಷೇಕ ವೇಳೆ 30 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಉದ್ಯಮಿಗಳು ಭಾಗವಹಿಸಲಿರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ, ಔದ್ಯೋಗಿಕ, ಶೈಕ್ಷಣಿಕ, ಹಾಗೂ ದೇಶ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ, ಸ್ಥಳೀಯ ಉದ್ಯಮಿಗಳ ಉತ್ಪನ್ನಗಳ ಮಾರುಕಟ್ಟೆಗೆ ಪೂರಕವಾದ, ವಸ್ತು ಪ್ರದರ್ಶನವನ್ನು ಫೆ.15 ರಿಂದ 28ರ ವರೆಗೆ ಆಯೋಜಿಸಲಾಗುತ್ತಿದೆ.

ಕೇಂದ್ರದ ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ, ಕ್ಲೀನ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಇಂಡಿಯಾ, ಯೋಜನೆಗಳು ಒಳಗೊಂಡಂತೆ ಎಲ್ಲಾ ಮಂತ್ರಾಲಯಗಳು ಹಾಗೂ ರಾಜ್ಯದ ಎಲ್ಲಾ ಇಲಾಖೆಗಳು ವಿಶೇಷವಾಗಿ ಕ್ಷೀರಭಾಗ್ಯ, ಅನ್ನಭಾಗ್ಯ, ಕೃಷಿ ಭಾಗ್ಯ, ವಿದ್ಯಾಶ್ರೀ, ಅಹಿಂದ ವರ್ಗಗಳ ಕಲ್ಯಾಣ, ಅಲ್ಪ ಸಂಖ್ಯಾತ ಅಭಿವೃದ್ಧಿ ಯೋಜನೆ ಸಂಬಂಧಿತ ಇಲಾಖೆಗಳು ಭಾಗವಹಿಸಲಿರುವ ಈ ಪ್ರದರ್ಶನದಲ್ಲಿ ಭಾರತದ 29 ರಾಜ್ಯಗಳು, ಕರ್ನಾಟಕದ 30 ಜಿಲ್ಲೆಗಳೇ ಅಲ್ಲದೆ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಭಾಗವಹಿಸುವಂತೆ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ.

ಈ ಪ್ರದರ್ಶನದ ಅವಧಿಯಲ್ಲಿ ಉದ್ಯಮ ಮೇಳ, ಕೃಷಿ ಮೇಳ, ಯೋಗಾಸನ ಶಿಬಿರ, ಸತ್ಸಂಗ ಶಿಬಿರ, ಧಾರ್ಮಿಕ, ಸಾಮಾಜಿಕ ಸಮಾಲೋಚನಾ ಸಭೆ ಗಳು, ವಿವಿಧ ಹಂತದ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಸಹಭಾಗಿತ್ವ ನೀಡಬೇಕೆಂದು ನೇತೃತ್ವದಲ್ಲಿ ಮಹಾ ಮಸ್ತಕಾಭಿಷೇಕ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಸುರೇಶ್‌ ಕುಮಾರ್‌ ಜೈನ್‌ ಮನವಿ ಮಾಡಿದರು.

ಸಂಸದ ಪ್ರತಾಪ್‌ಸಿಂಹ, ಆಹಾರ ಸಮಿತಿ ಅಧ್ಯಕ್ಷ ವಿನೋದ್‌ ಬಾಕ್ಲಿವಾಲ್‌, ಮೈಸೂರು ಜೈನ್‌ ಸಮಾಜದ ಅಧ್ಯಕ್ಷ ಎಂ.ಆರ್‌.ಸುನಿಲ್‌ ಕುಮಾರ್‌, ಮಾಜಿ ಅಧ್ಯಕ್ಷ ಪ್ರಕಾಶ್‌ ಬಾಬು, ಸದಸ್ಯ ಲಕ್ಷ್ಮೀಪ್ರಸಾದ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next