Advertisement

ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ

11:10 AM Nov 30, 2018 | Team Udayavani |

ಶಹಾಬಾದ: ಬೇಸಿಗೆಯೇ ಪ್ರಾರಂಭವಾಗಿಲ್ಲ. ಈಗಲೇ ಭೀಕರ ಜಲಕ್ಷಾಮ ಆವರಿಸಿ ಕುಡಿಯುವ ಹನಿ ನೀರಿಗಾಗಿ ಗ್ರಾಮಸ್ಥರು
ಪರಿತಪಿಸುತ್ತಿದ್ದಾರೆ. ಆದ್ದರಿಂದ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ತೊನಸನಹಳ್ಳಿ (ಎಸ್‌) ಗ್ರಾಪಂ ಅಧ್ಯಕ್ಷ ವಿಜಯಕುಮಾರ ಮಾಣಿಕ್‌ ನೇತೃತ್ವದಲ್ಲಿ ಎಚ್‌ಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ರಾಜಶೇಖರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ನಾಗೇಂದ್ರ ಹುಗ್ಗಿ, ಸ್ವಾತಂತ್ರ್ಯ ಪೂರ್ವದಿಂದಲೂ ತೊನಸನಹಳ್ಳಿ
(ಎಸ್‌) ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆಯಿದೆ. ಪ್ರತಿವರ್ಷವೂ ಇಲ್ಲಿ ನೀರಿನ ಅಭಾವವೇ ದೊಡ್ಡ ಸಮಸ್ಯೆ. ಶಾಶ್ವತ ಪರಿಹಾರಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಗಮನಹರಿಸುತ್ತಿಲ್ಲ. ಗ್ರಾಮದ ಜನರಿಗೆ ನೀರುಣಿಸುತ್ತ ಜೀವನಕ್ಕೆ ಆಧಾರವಾಗಿರುವ ಹಾರಬಾವಿ, ಸೇದೋ ಬಾವಿ, ಇಳೆಬಾವಿ, ಹಣಮಂತ ದೇವರ ಗಿರಕಿ ಬಾವಿ ಹೀಗೆ ಎಲ್ಲ ಬಾವಿಗಳು ಬತ್ತಿ ಹೋಗುತ್ತಿವೆ ಎಂದು ತಿಳಿಸಿದರು.

ಗ್ರಾಮದಲ್ಲಿರುವ ನಾಲ್ಕು ಕೊಳವೆ ಬಾವಿಗಳು ಅಂತರ್ಜಲ ಕುಸಿತದಿಂದ ಉಪಯೋಗಕ್ಕೆ ಬಾರದಂತಾಗಿ ನೀರಿನ ಸಮಸ್ಯೆ ತಲೆದೋರಿದೆ. ಸುಮಾರು 5000 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಜನರು ಮುಖ ತೊಳೆಯಲು ಲೆಕ್ಕ ಹಾಕಬೇಕಾದ ಪರಿಸ್ಥಿತಿ ಮೂಡಿದೆ. ಇನ್ನು ಸ್ನಾನ ಮಾಡುವುದು ದೂರದ ಮಾತು. ದೇವನ ತೆಗನೂರ ಗ್ರಾಮದ ಕೊಳವೆ ಬಾವಿ ಮುಖಾಂತರ ನೀರು ಗ್ರಾಮಕ್ಕೆ ಸರಬಜಾಗುತ್ತಿತ್ತು. 

ಅಲ್ಲಿಯೂ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಅಲ್ಲದೇ ವಿದ್ಯುತ್‌ ಕಣ್ಣಾ ಮುಚ್ಚಾಲೆ ಆಟದಿಂದ ಮತ್ತಷ್ಟು ಸಮಸ್ಯೆಯ ಗಂಭೀರತೆಗೆ ಕಾರಣವಾಗಿದೆ. ಹಲವಾರು ದಶಕಗಳಿಂದ ನೀರಿನ ಸಮಸ್ಯೆಯನ್ನೇ ಹೊತ್ತುಕೊಂಡು ಬದುಕು ಸಾಗಿಸುತ್ತಿರುವ ಗ್ರಾಮದ ಜನರಿಗೆ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಡಿ ಎಂದರು. 

ಎಚ್‌ಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ರಾಜಶೇಖರ ಪಾಟೀಲ ಮನವಿಗೆ ಸ್ಪಂದಿಸಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು. ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗೊಳೇದ್‌, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಬಂಡೇರ್‌, ಲಕ್ಷ್ಮಣ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next