Advertisement

ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಕ್ಕೆ  ಮನವಿ

11:15 AM Oct 15, 2017 | Team Udayavani |

ಮಹಾನಗರ: ಪರಿಸರ ಮಾಲಿನ್ಯವನ್ನುಂಟು ಮಾಡುವ ಹಾಗೂ ಹಿಂದೂ ದೇವತೆಗಳು, ರಾಷ್ಟ್ರ ಪುರುಷರನ್ನು ಅಪಮಾನ ಮಾಡುವ ಪಟಾಕಿಗಳಿಗೆ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಚುನಾವಣಾ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ, ಪೊಲೀಸ್‌ ಕಮಿಷನರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Advertisement

ದೀಪಾವಳಿಯ ಸಮಯದಲ್ಲಿ ಪಟಾಕಿಗಳ ಹೊದಿಕೆಗಳ ಮೇಲೆ ಶ್ರೀ ಲಕ್ಷ್ಮೀ, ಶ್ರೀ ಕೃಷ್ಣ ಮುಂತಾದ ದೇವತೆಗಳು, ರಾಷ್ಟ್ರಪುರುಷರ ಚಿತ್ರಗಳನ್ನು ಮುದ್ರಿಸಿ ಅಪಮಾನ ಮಾಡಲಾಗುತ್ತದೆ. ಜತೆಗೆ ಉತ್ಸವದ ಹೆಸರಿನಲ್ಲಿ ಪರಿಸರಕ್ಕೆ ಮಾಲಿನ್ಯ ಮಾಡಲಾಗುತ್ತಿದೆ. ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಹೊಸದಿಲ್ಲಿಯಲ್ಲಿ, ಮುಂಬಯಿ ಉಚ್ಚ ನ್ಯಾಯಾಲಯವು ಮುಂಬಯಿ ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಹೀಗಾಗಿ ಎಲ್ಲ ಕಡೆಯೂ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಲೋಕೇಶ್‌ ಕುತ್ತಾರ್‌, ಸುಮಾ ವೆಂಕಟೇಶ್‌, ಅರವಿಂದ, ಉಪೇಂದ್ರ ಆಚಾರ್ಯ, ಪ್ರಭಾಕರ್‌ ಪಡಿಯಾರ್‌ ಮೊದಲಾದವರು ನಿಯೋಗದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next