ಇದು ದೆಹಲಿಯ ರಾಜಪಥದಲ್ಲಿ 72ನೇ ಗಣರಾಜ್ಯೋತ್ಸವದ ದಿನವಾದ ಮಂಗಳವಾರ ನಡೆದ ಅಭೂತಪೂರ್ವ ಪರೇಡ್‌ನ ಚಿತ್ರಣ. ಗಣರಾಜ್ಯ ದಿನದ ಪರೇಡ್‌ನಲ್ಲಿ ದೇಶದ ರಕ್ಷಣಾ ಪಡೆಗಳ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈಭವವು ಅನಾವರಣಗೊಂಡಿದ್ದು, ಅಲ್ಲಿ ನೆರೆದಿದ್ದ 25 ಸಾವಿರದಷ್ಟು ಮಂದಿಯ ಕಣ್ಣುಗಳಿಗೆ ಹಬ್ಬ ಹಾಗೂ ಬೆರಗು ಮೂಡಿಸಿದವು.
Advertisement
ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 17 ಸ್ತಬ್ಧಚಿತ್ರಗಳು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 9 ಟ್ಯಾಬ್ಲೋಗಳು ಹಾಗೂ ರಕ್ಷಣಾ ಸಚಿವಾಲಯದ 6 ಸ್ತಬ್ಧಚಿತ್ರಗಳು ಪರೇಡ್‌ನಲ್ಲಿ ಭಾಗಿಯಾದವು. ಕೊರೊನಾ ಹಿನ್ನೆಲೆಯಲ್ಲಿ 15 ವರ್ಷದೊಳಗಿನ ಹಾಗೂ 65 ದಾಟಿದವರಿಗೆ ಪ್ರವೇಶಕ್ಕೆ ಅನುಮತಿಯಿಲ್ಲದ ಕಾರಣ, ಈ ವರ್ಷ ವೀಕ್ಷಕರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಿತ್ತು.
ಕಳೆದ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆದರೆ, 122 ಸದಸ್ಯರ ಬಾಂಗ್ಲಾ ಸಶಸ್ತ್ರ ಪಡೆಯು ಪಥಸಂಚಲನದಲ್ಲಿ ಪಾಲ್ಗೊಂಡಿತ್ತು. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿದ ನೆನಪಲ್ಲಿ ದೇಶವು ಸ್ವರ್ಣಿಮ್ ವಿಜಯ ವರ್ಷವನ್ನು ಆಚರಿಸುತ್ತಿದ್ದು, ಭಾರತೀಯ ಸೇನೆಯ ಟಿ-90 ಭೀಷ್ಮ, ಬಿಎಂಪಿ-2 ಶರಥ್, ಬ್ರಹ್ಮೋಸ್ ಕ್ಷಿಪಣಿಯ ಲಾಂಚರ್, ಪಿನಾಕಾ, ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಂ ಸಂವಿಜಯ್ ಕೂಡ ಪರೇಡ್ನಲ್ಲಿ ಬಲ ಪ್ರದರ್ಶನ ಮಾಡಿದವು.
Related Articles
Advertisement
131 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಾಟಜಮ್ಮು ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಮಂಗಳವಾರ ಬರೋಬ್ಬರಿ 131 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 30×20 ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜ ಇದಾಗಿದ್ದು, ಅತ್ತ ಪಾಕಿಸ್ತಾನದಲ್ಲಿ ಭೂಪ್ರದೇಶದಲ್ಲಿ ನಿಂತು ನೋಡಿದರೂ ಈ ಧ್ವಜ ಕಾಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ, ಸಿಂಗಾಪುರ, ಬಾಂಗ್ಲಾ, ಪಾಕಿಸ್ತಾನ, ಆಸ್ಟ್ರೇಲಿಯ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯವಾಗಿ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಕೊರೊನಾ ನಿಯಂತ್ರಿಸಲು ಚೀನಾಡಳಿತ ಬಿಗಿ ನಿರ್ಬಂಧಗಳನ್ನು ಹೇರಿರುವುದರಿಂದ; ಅಧಿಕಾರಿಗಳು ಮತ್ತು ಕುಟುಂಬವರ್ಗ ಮಾತ್ರ ಪಾಲ್ಗೊಂಡಿತ್ತು. ಚೈತಿ ಆರ್ಟ್ಸ್ ಫೌಂಡೇಶನ್‌ನಿಂದ ಸಿದ್ಧಪಡಿಸಲ್ಪಟ್ಟಿರುವ ವಂದೇ ಮಾತರಂ ಅನ್ನು ನುಡಿಸಬಲ್ಲಂತಹ ವಿಶೇಷ ಸಂಗೀತವಾದ್ಯವನ್ನು; ರಾಯಭಾರಿ ವಿಕ್ರಮ್ ಮಿಸ್ರಿ ಬಿಡುಗಡೆಗೊಳಿಸಿದರು.