ಹೊಸದಿಲ್ಲಿ: ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಸೋಮವಾರ ರಿಪಬ್ಲಿಕ್ ಟಿವಿ ಇಂಗ್ಲಿಷ್ ಸುದ್ದಿವಾಹಿನಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಅದರ ಅನುಸಾರ ಐದರಲ್ಲಿ ನಾಲ್ಕು ರಾಜ್ಯಗಳು ಬಿಜೆಪಿ ಪಾಲಾಗಲಿದ್ದರೆ, ಪಂಜಾಬ್‌ನಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಜಯ ಸಿಗಲಿದೆ ಎಂದು ಅಂದಾಜಿಸಲಾಗಿದೆ.
403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ 252-272 ಕ್ಷೇತ್ರ ಗಳಲ್ಲಿ ಬಿಜೆಪಿಯ ಮೈತ್ರಿ ಜಯಭೇರಿ ಬಾರಿಸಿ, ಅಧಿಕಾರಕ್ಕೆ ಬರ ಲಿದೆ. ರಾಜ್ಯ ದಲ್ಲಿ 2ನೇ ದೊಡ್ಡ ಪಕ್ಷವಾಗಿ 111-131 ಕ್ಷೇತ್ರಗಳೊಂದಿಗೆ ಎಸ್‌ಪಿ ಮೈತ್ರಿ ಕೂಟ, ಬಿಎಸ್‌ಪಿ 8-16, ಕಾಂಗ್ರೆಸ್ 3-9 ಸ್ಥಾನಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ.
ಗೋವಾದ 40 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಗೆ 16-20, ಕಾಂಗ್ರೆಸ್ ಮೈತ್ರಿಗೆ 9-3, ಎಎಪಿಗೆ 4-8 ಸ್ಥಾನ ಸಿಗಲಿದೆ. 60 ಸ್ಥಾನವಿರುವ ಮಣಿಪುರದಲ್ಲಿ, ಬಿಜೆಪಿ 31-37 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ಗೆ 13-19 ಸ್ಥಾನ, ಟಿಎಂಸಿ 1-9 ಕ್ಷೇತ್ರಗಳಲ್ಲಿ ಜಯ ಗಳಿಸುವ ಬಗ್ಗೆ ಉಲ್ಲೇಖೀಸಲಾಗಿದೆ. 70 ಕ್ಷೇತ್ರಗಳಿರುವ ಉತ್ತರಾಖಂಡ ದಲ್ಲಿಯೂ ಬಿಜೆಪಿ 36-42 ಸ್ಥಾನ ದೊಂದಿಗೆ ಸರ್ಕಾರ ರಚಿಸಲಿದೆ. ಕಾಂಗ್ರೆಸ್ 25-31 ಕ್ಷೇತ್ರಗಳಲ್ಲಿ ಗೆದ್ದರೆ, ಎಎಪಿಗೆ ಗರಿಷ್ಠ 2 ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ.
ಪಂಜಾಬ್‌ನಲ್ಲಿ ಎಎಪಿ
117 ವಿಧಾನ ಸಭಾ ಕ್ಷೇತ್ರಗಳಿರುವ ಪಂಜಾ ಬ್‌ನಲ್ಲಿ ಎಎಪಿ 50-56 ಸ್ಥಾನದಲ್ಲಿ ಗೆದ್ದು ಸರ್ಕಾರ ರಚಿಸಲಿದೆ ಎಂದು ರಿಪಬ್ಲಿಕ್ ಟಿವಿ ಹೇಳಿ ಕೊಂಡಿದೆ. ಕಾಂಗ್ರೆಸ್‌ಗೆ 42-48 ಸ್ಥಾನ ಸಿಕ್ಕರೆ, ಶಿರೋಮಣಿ ಅಕಾಲಿದಳಕ್ಕೆ 13-17, ಬಿಜೆಪಿಗೆ 3, ಇತರರಿಗೆ 1-3 ಕ್ಷೇತ್ರಗಳಲ್ಲಿ ಜಯ ಸಿಗುವ ಬಗ್ಗೆ ರಿಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಪ್ರಸ್ತಾವಿಸಲಾಗಿದೆ.