Advertisement

ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ : ಜಮ್ಮು ಮೂಲದ ಇಬ್ಬರು ಆರೋಪಿಗಳ ಬಂಧನ..!

11:56 AM Feb 23, 2021 | Team Udayavani |

ನವ ದೆಹಲಿ : ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಜಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮೂಲದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಇಬ್ಬರು ಆರೋಪಿಗಳ ಪೈಕಿ, ಒಬ್ಬನನ್ನು ಕಾಶ್ಮೀರ್ ಯುನೈಟೆಡ್ ಫ್ರಂಟ್ ಆರ್ಗನೈಸೇಶನ್ ನ ಅಧ್ಯಕ್ಷ ಸತ್ಬರಿಯ ಮೊಹಿಂದರ್ ಸಿಂಗ್, ಇನ್ನೊಬ್ಬ ಆರೋಪಿ ಗೋಲ್ ಗುಜ್ರಾಲ್ ನ ಮನ್ ದೀಪ್ ಸಿಂಗ್ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಓದಿ : ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯುನೆಲೆಯನ್ನು ಬಳಸಲು ಇಮ್ರಾನ್ ಗೆ ಅನುಮತಿಸಿದ ಭಾರತ..!

ಸದ್ಯ, ಈ ಇಬ್ಬರು ಆರೋಪಿಗಳ ಮೇಲೆ ಐಪಿಸಿ ಸೆಕ್ಶನ್ 308, 395, 120B ಹಾಗೂ 25/27 ಆರ್ಮ್ಸ್ ಆ್ಯಕ್ಟ್ ನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಕ್ರಿಯ ಬೆಂಬಲದೊಂದಿಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸುವುದಕ್ಕೆ ಸಾಧ್ಯವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Advertisement

ಇನ್ನು, ಸೋಮವಾರ(ಫೆ. 22)ದಂದು ಕೆಂಪುಕೋಟೆಯನ್ನು ಏರುತ್ತಿದ್ದ ಜಸ್ಪ್ರೀತ್ ಸಿಂಗ್ ಎಂಬವನನ್ನು ಬಂಧಿಸಲಾಗಿದೆ.

ಓದಿ : ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ, ಯಡಿಯೂರಪ್ಪನವರ ದುರಾಡಳಿತ ಕಾರಣ : ಸಿದ್ದರಾಮಯ್ಯ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next