Advertisement

ಗಣರಾಜ್ಯೋತ್ಸವ: ಕಣ್ಮನ ಸೆಳೆದ ಕರ್ನಾಟಕದ ಸ್ತಬ್ದ ಚಿತ್ರ

11:22 AM Jan 26, 2018 | |

ಹೊಸದಿಲ್ಲಿ:ದೇಶದೆಲ್ಲೆಡೆ 69 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ರಾಜಪಥ್‌ನಲ್ಲಿ ನಡೆಯುತ್ತಿರುವ ಆಕರ್ಷಕ ಪರೇಡ್‌ನ‌ಲ್ಲಿ ಕರ್ನಾಟಕದ ಪರಿಸರಮತ್ತು ವನ್ಯಜೀವಿಗಳ  ಸ್ತಬ್ದ ಚಿತ್ರ ಗಣ್ಯಾತೀಗಣ್ಯರ ಗಮನ ಸೆಳೆಯಿತು. 

Advertisement

ರಾಜ್ಯದ ವನ್ಯಜೀವಿ ಮತ್ತು ಪಕ್ಷಿ ಸಂಕುಲಗಳ ಸ್ತಬ್ದಚಿತ್ರದಲ್ಲಿ ಹುಲಿ , ಆನೆ , ಕಾಡುಕೋಣ, ಚಿರತೆ, ನವಿಲು, ಹಾರ್ನ್ಬಿಲ್‌, ನೀರು ನಾಯಿಗಳ ಪ್ರತಿಮೆಗಳಿದ್ದು ಮುಂಭಾಗದಲ್ಲಿದ್ದ 3 ಸಿಂಗಳೀಕಗಳು ಗಮನ ಸೆಳೆದವು.

ಸ್ತಬ್ದಚಿತ್ರ ಸಾಗಿ ಹೋಗುವ ವೇಳೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಮತ್ತು ಅವರ ಪತ್ನಿ ಎದ್ದು ನಿಂತು ಸಂಭ್ರಮಿಸಿದರು. 

ಸ್ತಬ್ದಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ 2005ರಲ್ಲಿ ಮೊದಲ ಸ್ಥಾನ ಪಡೆದಿದ್ದು ಬಿಟ್ಟರೆ ಮತ್ತೆ ಸಿಕ್ಕಿಲ್ಲ. ಆದರೆ ಎರಡು ಬಾರಿ 2ನೇ ಸ್ಥಾನ ಮತ್ತು 3ನೇ ಸ್ಥಾನ ಗೆದ್ದಿದೆ. 2015ರಲ್ಲಿ ನಮ್ಮ ರಾಜ್ಯದ ಚನ್ನಪಟ್ಟಣ ಗೊಂಬೆಗಳ ಸ್ತಬ್ದಚಿತ್ರಕ್ಕೆ ಮೂರನೇ ಬಹುಮಾನ ಲಭ್ಯವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next