Advertisement

ಗಣರಾಜ್ಯೋತ್ಸವ ಆಚರಣೆ

07:21 PM Jan 27, 2021 | Team Udayavani |

ಗೋಕಾಕ: ಗಣರಾಜ್ಯೋತ್ಸವವು ದೇಶದ ನಾಗರೀಕರಿಗೆ ತನ್ನ ರಾಷ್ಟ್ರದ ಜವಾಬ್ದಾರಿ ನೀಡಿದ ದಿನವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

Advertisement

ಮಂಗಳವಾರ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಾಗೂ ನಗರಸಭೆಗಳ ಆಶ್ರಯದಲ್ಲಿ ಜರುಗಿದಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಈಗಾಗಲೇ ಕೋವಿಶಿಲ್ಡ್‌ ಲಸಿಕಾಕರಣ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ ದೊರೆತು ಸದೃಢ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ:ಗಣರಾಜ್ಯೋತ್ಸವ ಸರಳ ಆಚರಣೆ

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದೆ ಕೆಂಪವ್ವ ಹರಿಜನ ಸೇರಿದಂತೆ ಸಾಧಕರನ್ನು ತಾಲೂಕಾಡಳಿತದಿಂದ ಸತ್ಕರಿಸಲಾಯಿತು. ವೇದಿಕೆಯ ಮೇಲೆ ಹಿರಿಯ ನ್ಯಾಯವಾದಿ ಬಿ.ಆರ್‌.ಕೊಪ್ಪ, ತಾ.ಪಂ. ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ವೈ.ಬಿ.ನಾಯಿಕ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಮುಖಂಡರಾದ ಸೋಮಶೇಖರ ಮಗದುಮ್ಮ, ಇಓ ಬಸವರಾಜ ಹೆಗ್ಗನಾಯಕ, ಡಿವೈಎಸ್‌ಪಿ ಜಾವೀದ ಇನಾಮದಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಥೋಡ, ಕೆ.ಎನ್‌. ವಣ್ಣೂರ, ಎ.ಬಿ.ಮಲಬನ್ನವರ, ಬಿಇಒ ಜಿ. ಬಿ. ಬಳಗಾರ, ಎಸ್‌. ಪಿ. ವರಾಳೆ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನ್ನವರ, ಅಧಿಕಾರಿಗಳು, ನಗರಸಭೆ ಸದಸ್ಯರು ಇದ್ದರು. ಶಿಕ್ಷಕ ಎ.ಜಿ.ಕೋಳಿ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next