Advertisement

Republic Day 2024 ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅತಿಥಿ?

12:41 AM Sep 21, 2023 | Team Udayavani |

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು 2024ರ ಗಣ ರಾಜ್ಯೋತ್ಸವ ದಿನದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Advertisement

ಜಿ20 ರಾಷ್ಟ್ರಗಳ ಸಮ್ಮೇಳನದ ನೇಪಥ್ಯ ದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಯವರೇ ಅಮೆರಿಕ ಅಧ್ಯಕ್ಷರಿಗೆ ಗಣರಾಜ್ಯ ದಿನದ ಮುಖ್ಯ ಅತಿಥಿಯಾಗುವಂತೆ ಆಹ್ವಾನ ನೀಡಿದ್ದಾರೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ತಿಳಿಸಿದ್ದಾರೆ.

ಸೆ.8ರಂದು ಮೋದಿ ಮತ್ತು ಬೈಡೆನ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆಗ ಮೋದಿಯವರು ಬೈಡೆನ್‌ರಿಗೆ ಆಹ್ವಾನ ನೀಡಿದರು ಎಂದು ರಾಯಭಾರಿ ಎರಿಕ್‌ ಗರ್ಸೆಟ್ಟಿ ಬುಧವಾರ ಹೇಳಿದ್ದಾರೆ.

2023ರ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ಧೆಲ್‌ ಫ‌ತ್ತಾಹ್‌ ಅಲ್‌-ಸಿಸಿ ಮುಖ್ಯ ಅತಿಥಿಯಾಗಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ (2015), ರಷ್ಯಾ ಅಧ್ಯಕ್ಷ ಪುತಿನ್‌ (2007), ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ (2008) ಮತ್ತು ಫ್ರಾನ್ಸ್‌ನ ಒಲಾಂದ್‌ (2016) ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next