Advertisement
ಸೇನಾ ಕಮಾಂಡರ್ ಲೆ.ಜ. ರಣಬೀರ್ ಸಿಂಗ್ ಅವರೂ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರು ಕೂಡ ಉಗ್ರರ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ನಾಗರಿಕರ ಬೆಂಬಲವಿದ್ದರೆ ಉಗ್ರವಾದವನ್ನು ಸುಲಭವಾಗಿ ಮಟ್ಟ ಹಾಕಬಹುದು. ಪಾಕಿಸ್ತಾನಕ್ಕೆ ಈ ಬೆಳವಣಿಗೆ ಯಿಂದ ಹತಾಶೆಯಾಗಿದ್ದು, ಇನ್ನಷ್ಟು ಉಗ್ರರನ್ನು ಭಾರತದೊಳಕ್ಕೆ ನುಸುಳುವಂತೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ನಾವು ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ, ಸರ್ಕಾರ ಹಾಗೂ ಭದ್ರತಾ ಪಡೆಗಳು ಕೈಗೊಂಡಿರುವ ಎಲ್ಲ ಯೋಜನೆಗಳಿಗೂ ಸೂಕ್ತ ಪ್ರತಿಫಲ ಸಿಗುತ್ತಿದೆ. ರಾಜ್ಯದಲ್ಲಿ ಯುವಕರನ್ನು ಉಗ್ರವಾದದತ್ತ ಸೆಳೆಯಲು ಸೇನೆ ಬಿಡುತ್ತಿಲ್ಲ. ಹೀಗಾಗಿ, ಯುವಕರ ಸೇರ್ಪಡೆ ಗಣನೀಯ ಇಳಿಕೆ ಕಂಡಿದೆ ಎಂದೂ ಸಿಂಗ್ ತಿಳಿಸಿದ್ದಾರೆ.
Related Articles
ದೇಶದ 18 ಕೋಟಿ ಮುಸ್ಲಿಮರ ಪೈಕಿ ಕೇವಲ 180 ಮಂದಿ ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಗುಪ್ತಚರ ದಳದ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಹೇಳಿದ್ದಾರೆ. ಭಾರತದಲ್ಲಿ ಸಲಫಿ ಹೊರತಾದ ಹಾಗೂ ಸೂಫಿ ಸಿದ್ಧಾಂತದ ಮುಸ್ಲಿಮರು ಇರುವುದರಿಂದಾಗಿ ಉಗ್ರ ಸಂಘಟನೆಯತ್ತ ಜನರು ಆಕರ್ಷಿತರಾಗಿಲ್ಲ. ಈ ಸಿದ್ಧಾಂತವು ಪ್ರಜಾಪ್ರಭುತ್ವ ಪರ ನಿಲುವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಹೆಚ್ಚು ಧಾರ್ಮಿಕರಾದಷ್ಟೂ ಹೆಚ್ಚು ಉಗ್ರವಾದದತ್ತ ಸೆಳೆಯಲ್ಪಡುತ್ತಾರೆ ಎಂದು ನಂಬಲಾಗಿದೆ. ಆದರೆ ಐಸಿಸ್‌ನಿಂದ ವಾಪಸಾದವರನ್ನು ಇಂಗ್ಲೆಂಡ್‌ನ ಭದ್ರತಾ ಪಡೆಗಳು ಸಂದರ್ಶನ ನಡೆಸಿದಾಗ, ಉಗ್ರವಾದದತ್ತ ಆಕರ್ಷಿತರಾದವರೆಲ್ಲರೂ ಧರ್ಮದ ಬಗ್ಗೆ ಅತ್ಯಂತ ಕಡಿಮೆ ತಿಳಿದುಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
Advertisement
259 ಯುವಕರು ಸೇನೆಗೆ ಸೇರ್ಪಡೆಕಣಿವೆ ರಾಜ್ಯದ 259 ಯುವಕರು ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಲೈಟ್ ಇನ್‌ಫೆಂಟ್ರಿ(ಜೆಕೆಎಲ್‌ಐ) ಬೆಟಾಲಿಯನ್‌ಗೆ ಸೇರ್ಪಡೆಯಾಗಿದ್ದಾರೆ. ಶ್ರೀನಗರದ ರಂಗರೇತ್‌ನಲ್ಲಿರುವ ರೆಜಿಮೆಂಟಲ್ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದ ಬಳಿಕ ಇವರು ಅಧಿಕೃತವಾಗಿ ಸೇನೆಗೆ ಸೇರಿದ್ದಾರೆ. ಉಗ್ರವಾದಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಇಳಿಮುಖವಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಈ ಸಿಹಿಸುದ್ದಿಯೂ ಬಂದಿರುವುದು ಭದ್ರತಾ ಪಡೆಗಳಿಗೆ ಹಾಗೂ ಕಣಿವೆ ರಾಜ್ಯದ ನಾಗರಿಕರಿಗೆ ನೆಮ್ಮದಿ ತಂದಿದೆ.