Advertisement

ಕುರುಹೀನಶೆಟ್ಟಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ

01:05 PM May 07, 2019 | Team Udayavani |

ಗಂಗಾವತಿ: ನಗರದ ನೀಲಕಂಠೇಶ್ವರ ದೇವಾಲಯ ನಿರ್ಮಾಣದ ಸುವರ್ಣಮಹೋತ್ಸವ ಹಾಗೂ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ನಿಮಿತ್ತ ಸೋಮವಾರ ಕುರುಹೀನಶೆಟ್ಟಿ ಸಮಾಜದ ಸುಮಂಗಲಿಯರು ಹಮ್ಮಿಕೊಂಡಿದ್ದ 1008 ಕುಂಭ ಮೆರವಣಿಗೆ ಗಮನ ಸೆಳೆಯಿತು.

Advertisement

ನಗರದ ಶ್ರೀಚನ್ನಬಸವಸ್ವಾಮಿ ಮಲ್ಲಿಕಾರ್ಜುನ ಮಠದಿಂದ ಪ್ರಾರಂಭವಾದ ಮೆರವಣಿಗೆ ಮಹಾತ್ಮಗಾಂಧಿ ಬಸವಣ್ಣ ಮಳೆಮಲ್ಲೇಶ್ವರ ವೃತ್ತದ ಮೂಲಕ ಶ್ರೀನೀಲಕಂಠೇಶ್ವರ ದೇವಾಲಯ ತಲುಪಿತು. 1008 ಕುಂಭ ಹೊತ್ತ ಮಹಿಳೆಯರು ಭಂಡಾರ ಬಣ್ಣದ ಸೀರೆ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಭಜನಾ ತಂಡ, ಸಮಾಳ, ತಾಷಾ ಸೇರಿ ಹಲವು ಜಾನಪದ ಕಲಾ ತಂಡಗಳು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಕುಂಭ ಮೆರವಣಿಗೆಗೆ ಕುರುಹೀನ ಶೆಟ್ಟಿ ಸಮಾಜದ ಜಗದ್ಗುರು ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಸೇರಿ ಕುರುಹೀನ ಶೆಟ್ಟಿ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಒಂದೂವರೆ ಕಿ.ಮೀ. ಉದ್ದದ ಮೆರವಣಿಗೆಯ ಮಾರ್ಗ ಮಧ್ಯೆ ಕುಂಭ ಹೊತ್ತ ಮಹಿಳೆಯರಿಗೆ ವಿವಿಧ ಸಮುದಾಯದವರು ನೀರು, ಮಜ್ಜಿಗೆ ವಿತರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next