Advertisement

ತಾಲಿಬಾನ್ ಸಂಘಟನೆಯೊಂದಿಗೆ ಸಚಿವ ಜೈಶಂಕರ್ ಭೇಟಿ ಸತ್ಯಕ್ಕೆ ದೂರವಾದದ್ದು : ಸರ್ಕಾರ ಸ್ಪಷ್ಟನೆ

08:07 PM Jun 29, 2021 | Team Udayavani |

ನವ ದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಾಲಿಬಾನ್ ಸಂಘಟನೆಯ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಸರ್ಕಾರದ ಆಂತರಿಕ ಮೂಲಕಗಳು ಸ್ಪಷ್ಟ ಪಡಿಸಿವೆ.

Advertisement

ತಾಲೀಬಾನಿ ಸಂಘಟನೆಯ ಭಾರತದೊಂದಿಗಿನ ಸಂಬಂಧವು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ದೃಷ್ಟಿಕೋನ ಮತ್ತು ಆಶಯವನ್ನು ಹೊಂದಿರುವುದಿಲ್ಲ ಎಂದು ಹಾಗೂ ಜೈಶಂಕರ್‌ ಅವರು ತಾಲೀಬಾನ್ ಸಂಘಟನೆಯ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿರುವ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡುತ್ತಿದ್ದ ಬೆನ್ನಿಗೆ ಕೇಂದ್ರ ಸರ್ಕಾರದ ಮೂಲಗಳು ಈ ಭೇಟಿ ಸುಳ್ಳು ಎಂದು ತಿಳಿಸಿವೆ.

ಇದನ್ನೂ ಓದಿ : ಭವಿಷ್ಯದಲ್ಲಿ ಯತ್ನಾಳ್ ಗೆ ಉತ್ತಮ ದಿನ ಬರಲಿ, ಅವರ ಧ್ವನಿಗೆ ಧ್ವನಿಯಾಗಿರುತ್ತೇನೆ: ಯೋಗೇಶ್ವರ್

ಸಾಮಾಜಿಕ ಮಾಧ್ಯಮಗಳಲ್ಲಿ ವಿದೇಶಾಂಗ ಸಚಿವರು ತಾಲಿಬಾನ್ ಉಗ್ರ ಸಂಘಟನೆಯ ಪ್ರಮುಖರನ್ನು ಭೇಟಿಯಾಗಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು, ಆಧಾರ ರಹಿತವಾದದ್ದು ಹಾಗೂ ಚೇಷ್ಟೆಯಿಂದ ಕೂಡಿದ್ದು ಎಂದು ಹೇಳಿದೆ.

ಅಫ್ಗಾನಿಸ್ತಾನದಲ್ಲಿ ಯುದ್ಧದ ಕಾರಣದಿಂದ   ಎರಡು ದಶಕಗಳಿಂದ ಬೀಡು ಬಿಟ್ಟದ್ದ ಅಮೆರಿಕ ಸೇನಾ ಪಡೆಗಳು, ದೇಶದಲ್ಲಿ ತಮ್ಮ ಉಪಸ್ಥಿತಿಯನ್ನು ಅಂತ್ಯಗೊಳಿಸುತ್ತಿವೆ. ಸೆಪ್ಟೆಂಬರ್ 11ರ ಒಳಗೆ ಅಫ್ಗಾನಿಸ್ತಾನದಿಂದ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದನ್ನು ಅಮೆರಿಕ ನಿರ್ಧರಿಸಿದೆ. ಈ ಬೆನ್ನಿಗೆ ಜೈಶಂಕರ್‌ ಅವರ ಕುರಿತ ಸುಳ್ಳು ವರದಿಗಳು ಹರಿದಾಡಿವೆ.

Advertisement

ಇನ್ನು,  ಅಫ್ಗಾನ್ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ತ್ವರಿತಗತಿಯ ಬೆಳವಣಿಗೆಗಳ ಮಧ್ಯೆಯೇ ಇತ್ತೀಚೆಗೆ ವಾಷಿಂಗ್ಟನ್ ಡಿಸಿಯಲ್ಲಿ ‘ಅರಬ್ ಸೆಂಟರ್‘ ವೆಬಿನಾರ್‌ ಒಂದನ್ನು ಆಯೋಜಿಸಿತ್ತು.

ವೆಬಿನಾರ್ ನಲ್ಲಿ ಭಾಗಿಯಾಗಿದ್ದ ಕತಾರಿ ರಾಜತಾಂತ್ರಿಕರೊಬ್ಬರು, ‘ಭವಿಷ್ಯದಲ್ಲಿ ತಾಲೀಬಾನಿ ಸಂಘಟನೆಗಳು ಅಫ್ಗಾನಿಸ್ತಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಭಾರತವು ತಾಲೀಬಾನ್‌ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 14,724 ಸೋಂಕಿತರು ಗುಣಮುಖ, 3222 ಹೊಸ ಪ್ರಕರಣ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next