Advertisement

ಸಮಸ್ಯಾತ್ಮಕ ಮತಗಟ್ಟೆ ವರದಿ ನೀಡಿ: ಹೆಪ್ಸಿಬಾ

01:00 AM Feb 13, 2019 | Harsha Rao |

ಉಡುಪಿ: ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಮತಗಟ್ಟೆಯ ಸಮಗ್ರ ವರದಿಯನ್ನು ಮುಂದಿನ 4 ದಿನಗಳಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿ¨ªಾರೆ.

Advertisement

ಮಂಗಳವಾರ ರಜತಾದ್ರಿಯಲ್ಲಿ ನಡೆದ ಜಿಲ್ಲೆಯ ಸೆಕ್ಟರ್‌ ಅಧಿಕಾರಿಗಳ, ಪೊಲೀಸ್‌ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರದಿಯಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನವಾದ, ಮತ ದಾರರಿಗೆ ಬೆದರಿಕೆ ಉಂಟುಮಾಡುವ, ಮತದಾರರು ಬರಲು ಹೆದರಿಕೆಯುಳ್ಳ ಮತಗಟ್ಟೆಗಳ ಬಗ್ಗೆ ಸಂಪೂರ್ಣ ವಿವರವನ್ನು ನೀಡಬೇಕು. ಈ ಬಾರಿಯ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಯಾವುದೇ ಅಡೆತಡೆಗಳಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ಅತೀ ಕಡಿಮೆ ಮತದಾನವಾದ ಮತ ಗಟ್ಟೆಗೆ ತೆರಳಿ ನೈಜ ಪರಿಸ್ಥಿತಿಯ ವರದಿ ನೀಡಬೇಕು. ಒಂದು ಮತಗಟ್ಟೆಯಲ್ಲಿ ಒಬ್ಬ ಅಭ್ಯರ್ಥಿಗೆ ಶೇ. 75ಕ್ಕಿಂತಲೂ ಹೆಚ್ಚು ಮತದಾನವಾದ ಪ್ರದೇಶದಲ್ಲಿ ಮತದಾರರಿಗೆ ಭಯ, ಆಮಿಷ ನೀಡಿರುವಂತಹ ಘಟನೆಗಳು ನಡೆದಿದ್ದರೆ ನೈಜ ವರದಿ ನೀಡಿ, ಸ್ಥಳೀಯ ಬಿಎಲ…ಒಗಳು, ಸೆಕ್ಟರ್‌ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಫೆ.16ರ ಒಳಗೆ ವರದಿ ನೀಡಬೇಕು ಎಂದರು.

ಚುನಾವಣೆ ಕರ್ತವ್ಯದಲ್ಲಿ ಪ್ರತಿಯೊಬ್ಬರೂ ಸಂಪೂರ್ಣ ವಾಗಿ ತೊಡಗಿಕೊಳ್ಳಬೇಕು. ಲೋಪಗಳಿಗೆ ಆಸ್ಪದ ನೀಡದೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಲೋಕಸಭಾ ಚುನಾವಣೆಗಾಗಿ 92 ಜನ ಸೆಕ್ಟರ್‌ ಅಧಿಕಾರಿಗಳು ಮತ್ತು 132 ಪೊಲೀಸ್‌ ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next