Advertisement

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

01:51 AM Aug 24, 2024 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಆರಂಭವಾಗಲಿದೆ ಎನ್ನಲಾಗಿರುವ ಜನಗಣತಿ ಜತೆಗೆ ಜಾತಿಗಣತಿ ನಡೆ­ಸಲೂ ಕೇಂದ್ರ ಸರಕಾರ‌ ಚಿಂತನೆ ನಡೆ­ಸಿದೆ ಎನ್ನಲಾಗಿದೆ. ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಒಕ್ಕೂಟ, ಎನ್‌ಡಿಎ ಮಿತ್ರ ಪಕ್ಷವಾಗಿರುವ ಜೆಡಿಯು, ಎಲ್‌ಜೆಪಿ (ಪಾಸ್ವಾನ್‌) ಈ ಬಗ್ಗೆ ಒಲವು ಹೊಂದಿ­ರುವ ಹಿನ್ನೆಲೆಯಲ್ಲಿ ಜನಗಣತಿ ಜತೆಗೇ ಜಾತಿಗಣತಿ ನಡೆಸುವ ಬಗ್ಗೆ ಸರಕಾರ‌ ಪರಾಮರ್ಶೆ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಕೇಂದ್ರ ಗೃಹ ಸಚಿವಾಲಯ ಮತ್ತು ಕಾರ್ಯಕ್ರಮ ಅನುಷ್ಠಾನ, ಸಾಂಖ್ಯಿಕ ಸಚಿವಾಲಯ ಜನಗಣತಿ ನಡೆಸುವ ಬಗ್ಗೆ ಅಂತಿಮ ಹಂತದ ಸಿದ್ಧತೆ ನಡೆಸಿರುವಂತೆಯೇ ಜಾತಿ ಗಣತಿ ನಡೆಸುವ ವಿಚಾರ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ಸಮ್ಮತಿ ದೊರೆತ ಬಳಿಕ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ಜಾತಿ ಗಣತಿ ನಡೆಸಲಾ­ಗಿಲ್ಲ. 2011ರಲ್ಲಿ ಯುಪಿಎ ಸರಕಾರ‌ ದೇಶಾದ್ಯಂತ ಜಾತಿಗಣತಿ ನಡೆಸಿದ್ದರೂ, ವರದಿ ಬಿಡು­ಗಡೆ ಮಾಡಿರಲಿಲ್ಲ. 2015ರಲ್ಲಿ ಕರ್ನಾಟಕದ ಕಾಂಗ್ರೆಸ್‌ ಸರಕಾರ‌ ಜಾತಿಗಣತಿ ನಡೆಸಿತ್ತು. ವಿಪಕ್ಷ ಕಾಂಗ್ರೆಸ್‌ ಜಾತಿಗಣತಿ ನಡೆಸಲು ಕೇಂದ್ರಕ್ಕೆ ಆಗ್ರಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next