Advertisement

ಎಂಇಎಸ್‌ ಪುಂಡಾಟಿಕೆ ಖಂಡಿಸಿ ಪ್ರತಿಕೃತಿ ದಹನ

05:30 PM Dec 16, 2021 | Team Udayavani |

ಮುದಗಲ್ಲ: ಕನ್ನಡ ಬಾವುಟ ಸುಟ್ಟು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ದುಷ್ಕತ್ಯ ಎಸಗಿದ ಶಿವಸೇನೆಯ ಮುಖ್ಯಸ್ಥ ಉದ್ಭವ ಠಾಕ್ರೆ ಹಾಗೂ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಪಟ್ಟಣದ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಮುಂಭಾಗದ ರಸ್ತೆ ಮೂಲಕ ತೆರಳಿ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಮುಖ್ಯರಸ್ತೆಯಲ್ಲಿ ಉದ್ಭವ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ ರಾಘು ಕುದುರಿ ಮಾತನಾಡಿ, ಕನ್ನಡ ನಾಡು-ನುಡಿ ರಕ್ಷಣೆಗೆ ಕನ್ನಡಪರ ಸಂಘಟನೆಗಳ ಬೆಂಬಲಕ್ಕೆ ಸರಕಾರ ನಿಲ್ಲಬೇಕು. ಕನ್ನಡಿಗರ ಸ್ವಾಭಿನಮಾನಕ್ಕೆ ಧಕ್ಕೆ ತರುವ ಕೆಲಸಕ್ಕೆ ಕುಮ್ಮಕ್ಕು ನೀಡಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಭ್ರಷ್ಟ ಠಾಕ್ರೆಗೆ ಗಡಿಪಾರು ಮಾಡಬೇಕು. ಎಂಇಎಸ್‌ ಪುಂಡಾಟಿಕೆ ಹೆಚ್ಚಾಗುತ್ತಿದ್ದು ಸರಕಾರ ಇದಕ್ಕೆ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.

ಮುದಗಲ್ಲ ಘಟಕಾಧ್ಯಕ್ಷ ಮೌನೇಶ ಚೆಲುವಾದಿ, ಗೌರವಾಧ್ಯಕ್ಷ ಸಂಗಮೇಶ ಸರಗಣಾಚಾರಿ, ಕಾರ್ಯಾಧ್ಯಕ್ಷ ಜವಾಹರಸೇಠ, ಸುಭಾಶ್‌ ಪಾಟೀಲ, ಮಂಜುನಾಥ ಹಡಪದ, ಬಸವರಾಜ ದೊಡ್ಡಮನಿ, ಫಾರುಕ್‌ ಅರಬ್‌, ಸಂಜೀವ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next