Advertisement

ಬದಲಾಗ್ತಿದೆ ಸೌದಿ ಅರೇಬಿಯಾ

06:25 AM Oct 26, 2017 | Team Udayavani |

ರಿಯಾದ್‌: “ನಾವು ಆಧುನಿಕ ಇಸ್ಲಾಂಗೆ ಹಿಂದಿರುಗುತ್ತೇವೆ. ಜತೆಗೆ ಎಲ್ಲ ರೀತಿಯ ಧರ್ಮದ ಜನರನ್ನು ಸ್ವಾಗತಿಸುತ್ತೇವೆ’ ಹೀಗೆಂದು ಹೇಳಿದ್ದು ಸೌದಿ ಅರೇಬಿಯಾದ ರಾಜ ಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌. ಅವರ ಈ ಹೇಳಿಕೆಯಿಂದಾಗಿ ಸೌದಿ ಅರೇಬಿಯಾದ ಆಡಳಿತ ವ್ಯವಸ್ಥೆ ಅಚ್ಚರಿಪಟ್ಟಿದೆ. ಹೇಳಿ ಕೇಳಿ ಸೌದಿ ಅರೇಬಿಯಾ ಸೇರಿದಂತೆ ಸಂಯುಕ್ತ ಅರಬ್‌ ಗಣರಾಜ್ಯದಲ್ಲಿ ಕಟ್ಟುನಿಟ್ಟಿನಲ್ಲಿ ಧಾರ್ಮಿಕ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ತೀವ್ರಗಾಮಿತನ ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ರಾಜಕುಮಾರ ಮೊಹಮ್ಮದ್‌ ಹೇಳಿದ್ದಾರೆ. 

Advertisement

ರಿಯಾದ್‌ನಲ್ಲಿ ಆಯೋಜಿಸಲಾಗಿದ್ದ ಭವಿಷ್ಯದ ಬಂಡವಾಳ ಹೂಡಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ತೀವ್ರ ಗಾಮಿ ತತ್ವಗಳನ್ನು ಮುಂದಿಟ್ಟುಕೊಂಡು ನಮ್ಮ ಮುಂದಿನ ಮೂವತ್ತು ವರ್ಷಗಳ ಜೀವನ ಹಾಳು ಮಾಡಲು ಬಯಸುವುದಿಲ್ಲ. ಅಂಥ ತತ್ವವನ್ನೇ ಇಲ್ಲವಾಗಿಸುವುದೇ ಆದ್ಯತೆ ಎಂದು ಹೇಳಿದ್ದಾರೆ. 

ಉಗ್ರ ಸಂಘಟನೆ ಅಲ್‌-ಖೈದಾ ನಂಬಿಕೆ ಹೊಂದಿರುವ ಶುದ್ಧೀಕರಣ ಪ್ರಕ್ರಿಯೆ ಮತ್ತು ತೀವ್ರಗಾಮಿತನ, ರಾಜಮನೆತನದ ಮಾತೇ ಅಂತಿಮ ಎಂಬ ಹೇಳಿಕೆ ಇರುವ ಸೌದಿ ಅರೇಬಿಯಾದಲ್ಲಿ ರಾಜವಂಶಸ್ಥನಿಂದಲೇ ಬದಲಾವಣೆಯ ಮಾತುಗಳು ಬಂದಿರು ವುದು ಈಗ ಅಚ್ಚರಿಗೆ ಕಾರಣವಾಗಿದೆ. ತೈಲೋದ್ದಿಮೆಯ ಬಗ್ಗೆ ಡೋಲಾಯಮಾನದ ಸ್ಥಿತಿ ಇರುವ ಸಂದರ್ಭದಲ್ಲಿ ದೀರ್ಘ‌ ಕಾಲೀನ ಆರ್ಥಿಕ ನೀತಿ ಮತ್ತು ಸಾಮಾಜಿಕ ಜೀವನ ಕ್ರಮಗಳ ಬಗ್ಗೆ ರಾಜಕುಮಾರ ಸಲ್ಮಾನ್‌ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next