Advertisement

Alien planet: ಮತ್ತೂಂದು ಭೂಮಿಯ ಸುಳಿವು!

01:19 AM Apr 07, 2023 | Team Udayavani |

ನ್ಯೂಯಾರ್ಕ್‌: ನಾವಿರುವ ಭೂಮಿಯಂತೆ ಬ್ರಹ್ಮಾಂಡದಲ್ಲಿ ಇನ್ನೊಂದು ಭೂಮಿಯಿರಬಹುದಾ ಎಂಬ ಪ್ರಶ್ನೆಗೆ ಅಮೆರಿಕದ ವಿಜ್ಞಾನಿಗಳಿಗೆ ಅಚ್ಚರಿಯ ಸುಳಿವೊಂದು ಸಿಕ್ಕಿದೆ.

Advertisement

ಭೂಮಿಯಿಂದ 12 ಜ್ಯೋತಿವರ್ಷಗಳಷ್ಟು (72 ಟ್ರಿಲಿಯನ್‌ ಮೈಲ್ಸ್‌) ದೂರವಿರುವ “ವೈಜೆಡ್‌ ಸೆಟಿ ಬಿ’ ಎಂಬ ಗ್ರಹವು ಖಗೋಳಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದೆ.ಅಮೆರಿಕ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್‌ ವತಿಯಿಂದ ಕಾರ್ಯನಿರ್ವಹಿಸುವ ರೇಡಿಯೊ ದೂರದರ್ಶಕ “ಕಾರ್ಲ್ ಜಿ. ಜಾನ್ಸಿ$R ವೆರಿ ಲಾರ್ಜ್‌ ಅರೆ’ ಮೂಲಕ ವೈಜೆಡ್‌ ಸೆಟಿ ಬಿ ಗ್ರಹ ಮತ್ತು ಇದರ ನಕ್ಷತ್ರ “ವೈಜೆಡ್‌ ಸೆಟಿ’ ಅನ್ನು ಖಗೋಳಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದಾರೆ. ವೈಜೆಡ್‌ ಸೆಟಿ ನಕ್ಷತ್ರದ ಮೂಲಕ ಪದೇ ಪದೆ ಸಿಗ್ನಲ್‌ಗ‌ಳು ಹೊರಹೊಮ್ಮುತ್ತಿರುವುದನ್ನು ಖಗೋಳಶಾಸ್ತ್ರಜ್ಞರು ಗಮನಿಸಿದ್ದಾರೆ. ಈ ಸಿಗ್ನಲ್‌ಗ‌ಳು ಗ್ರಹದ ಕಾಂತಕ್ಷೇತ್ರ ಮತ್ತು ಅದು ಪರಿಭ್ರಮಿಸುವ ನಕ್ಷತ್ರದ ನಡುವಿನ ಪರಸ್ಪರ ಕ್ರಿಯೆಗಳಿಂದ ಉತ್ಪತ್ತಿಯಾಗಿದೆ. ಇದರ ಸಿಗ್ನಲ್‌ಗ‌ಳು ಶಕ್ತಿಯುತವಾಗಿವೆ.

ಭೂಮಿಯಂತೆ ಈ ಗ್ರಹದ ಮೇಲೆ ವಾಸಯೋಗ್ಯ ಸ್ಥಳ ಇರುವ ಬಗ್ಗೆ ಈ ಸಿಗ್ನಲ್‌ಗ‌ಳು ಸುಳಿವು ನೀಡುತ್ತಿವೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next