Advertisement

ಏಕತೆಗಾಗಿ 370ನೇ ವಿಧಿ ರದ್ದು

10:07 AM Nov 04, 2019 | Team Udayavani |

ಮಂಗಳೂರು: ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವುದು ಎಲ್ಲರ ಹೊಣೆ. ಅದೇ ಉದ್ದೇಶದಿಂದ 370ನೇ ವಿಧಿಯನ್ನು ರದ್ದು ಮಾಡಲಾಗಿದೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಬೆಂಬಲಿಸಿವೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

Advertisement

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಶನಿವಾರ ಜರಗಿದ ವಜ್ರಮಹೋತ್ಸವ ವರ್ಷದ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡಿಜಿಟಲ್‌ ತಂತ್ರಜ್ಞಾನಕ್ಕೆ ಆದ್ಯತೆ ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರ ಲಾಗಿದೆ. ಇದು ಭ್ರಷ್ಟಾಚಾರವನ್ನು ಪರಿ ಣಾಮ ಕಾರಿ ಯಾಗಿ ನಿಯಂತ್ರಿಸಲು ಸಹ ಕಾರಿ. ಫಲಾನು ಭವಿ ಖಾತೆಗೆ ನಗದು ಜಮೆ ಮಾಡು ತ್ತಿರುವು ದರಿಂದ ಅವರು ಸರದಿ ಸಾಲಿನಲ್ಲಿ ನಿಲ್ಲುವ, ಕೈ ಕುಲುಕುವ, ಕೈ ಮಡಚುವ ಪ್ರಮೇಯ ತಪ್ಪಿದೆ ಎಂದು ನಾಯ್ಡು ಹೇಳಿದರು.

ಸ್ಟಾರ್ಟ್‌ಅಪ್‌ ಇಂಡಿಯಾ ಜಾರಿಗೆ ಬಂದ ಬಳಿಕ ದೇಶದಲ್ಲಿ 21 ಸಹಸ್ರ ಸ್ಟಾರ್ಟ್‌ ಅಪ್‌ಗ್ಳು ಸ್ಥಾಪನೆಯಾಗಿವೆ. 1.20 ಲಕ್ಷ ಗ್ರಾ.ಪಂ.ಗಳನ್ನು ಒಎಫ್ಸಿ ಜಾಲಕ್ಕೆ ತರಲಾಗಿದ್ದು, ಭವಿಷ್ಯದಲ್ಲಿ 2.15 ಲಕ್ಷ ಗ್ರಾ.ಪಂ.ಗಳಲ್ಲಿ ಅಳವಡಿಕೆಯಾಗಲಿದೆ. ರಾಜಕಾರಣ ದಲ್ಲಿ ಉತ್ತಮ ಗುಣನಡತೆ, ಸಾಧನೆ, ಅರ್ಹತೆ ಮತ್ತು ಸಾಮರ್ಥ್ಯ ಎಂಬ ನಾಲ್ಕು ಅಂಶಗಳು ಮುಂಚೂಣಿಯಲ್ಲಿರಬೇಕು. ಜಾತಿ, ಮತೀಯತೆ, ನಗದು ಹಣದ ಹರಿವು ಮತ್ತು ಅಪರಾಧ ಪ್ರವೃತ್ತಿ ಬಹಳ ಅಪಾಯ ಕಾರಿ ಎಂದವರು ಹೇಳಿದರು.

ಕೌಶಲಭರಿತ ಕಾರ್ಯಪಡೆಯಾಗಿ ಮಾನವ ಸಂಪನ್ಮೂಲ ಜ್ಞಾನ ಆಧಾರಿತ, ಡಿಜಿಟಲ್‌ ಕೇಂದ್ರೀಕೃತ 21ನೇ ಶತಮಾನದ ಆವಶ್ಯಕತೆಗೆ ಪೂರಕವಾಗಿ ವಿದ್ಯಾವಂತ ಮಾನವ ಸಂಪನ್ಮೂಲವು ಉನ್ನತ ಕೌಶಲಭರಿತ ಕಾರ್ಯಪಡೆಯಾಗಿ ಪರಿವರ್ತಿತವಾಗಬೇಕಾಗಿದೆ ಎಂದು ತಮ್ಮ ಘಟಿಕೋತ್ಸವ ಭಾಷಣದಲ್ಲಿ ಹೇಳಿದ ವೆಂಕಯ್ಯ ನಾಯ್ಡು, ನಮ್ಮ ದೇಶದ ಆವಶ್ಯಕತೆಗಳನ್ನು ಪೂರೈಸುವುದು ಮಾತ್ರವಲ್ಲದೆ, ವಿಶ್ವದ ಇತರ ರಾಷ್ಟ್ರಗಳಿಗೂ ನಮ್ಮ ಉತ್ಪನ್ನಗಳನ್ನು ಪೂರೈಸುವ ಶಕ್ತಿಯಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಭಾರತವನ್ನು ಜ್ಞಾನಭರಿತ ಮತ್ತು ಕೌಶಲಭರಿತ ಮಾನವಸಂನ್ಮೂಲಗಳ ಜಾಗತಿಕ ಕೇಂದ್ರವಾಗಿ ರೂಪಿಸುವಲ್ಲಿ ಸುರತ್ಕಲ್‌ ಎನ್‌ಐಟಿಯಂತಹ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದರು.

ಮಾತೃಭಾಷೆಯನ್ನು ಪ್ರೀತಿಸಿ, ಪೋಷಿಸಿ
ಮಾತೃಭಾಷೆ ಕಣ್ಣಿನ ದೃಷ್ಟಿ ಇದ್ದಂತೆ. ಅನ್ಯಭಾಷೆಗಳು ಕನ್ನಡಕ ಇದ್ದಂತೆ. ಆದುದರಿಂದ ಮಾತೃಭಾಷೆಯನ್ನು ಪ್ರೀತಿಸಬೇಕು, ಪೋಷಿಸಬೇಕು. ಭಾಷಾ ಔರ್‌ ಭಾವನಾ ಏಕ್‌ ಸಾಥ್‌ ಚಲ್ತಾ ಹೈ -ಭಾಷೆ ಮತ್ತು ಭಾವನೆ ಜತೆಯಾಗಿ ಸಾಗುತ್ತವೆ. ಮಕ್ಕಳಿಗೆ ಹೈಸ್ಕೂಲ್‌ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಯಕ್ಷಗಾನ ಸೇರಿದಂತೆ ಶ್ರೀಮಂತ ಕಲಾಸಂಪತ್ತನ್ನು ಹೊಂದಿವೆ. ಉತ್ತಮ ಪ್ರಾಕೃತಿಕ ಸಿರಿಯೂ ಇಲ್ಲಿದೆ. ಕಲ್ಚರ್‌ (ಸಂಸ್ಕೃತಿ) ಮತ್ತು ನೇಚರ್‌ (ಪ್ರಕೃತಿ) ನಮ್ಮ ಭವಿಷ್ಯ. ನಾವು ಇವೆರಡನ್ನೂ ಪ್ರೀತಿಸಬೇಕು, ಸಂರಕ್ಷಿಸಬೇಕು. ಇಂದು ನಾವು ಕಾಣುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ನಿಸರ್ಗದ ಬಗ್ಗೆ ನಮ್ಮ ನಿರ್ಲಕ್ಷ್ಯವೇ ಕಾರಣ ಎಂದರು.

ಕರಾವಳಿ ಆಹಾರ ಪದ್ಧತಿಗೆ ಶ್ಲಾಘನೆ
ಉಭಯ ಜಿಲ್ಲೆಗಳು ಆಹಾರ ಕ್ಷೇತ್ರಕ್ಕೆ ಅನನ್ಯ ತಿನಿಸುಗಳನ್ನು ಪರಿಚಯಿಸಿವೆ. ನೀರುದೋಸೆ, ಇಡ್ಲಿ ಸಾಂಬಾರ್‌, ಪಾಲಕ್‌ ಪಲಾವ್‌, ಉತ್ತಪ್ಪ, ರವಾ ಇಡ್ಲಿ ಹೀಗೆ ಖಾದ್ಯಗಳ ಪಟ್ಟಿ ಮುಂದುವರಿಯುತ್ತದೆ. ಭಾರತೀಯ ಆಹಾರ ಪದ್ಧತಿ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ದಿಢೀರ್‌ ಆಹಾರ ನಮಗೆ ಒಗ್ಗುವಂಥದ್ದಲ್ಲ. ದಿಢೀರ್‌ ಆಹಾರ ದಿಢೀರ್‌ ರೋಗಗಳಿಗೆ ಮೂಲ. ಮನೆಯ ಆಹಾರಕ್ಕೆ ಆದ್ಯತೆ ಇರಲಿ. ನಮ್ಮ ಯೋಗ ಇಂದು ವಿಶ್ವಮಾನ್ಯತೆ ಗಳಿಸಿದೆ. ಅದು ಬಾಡಿ(ದೇಹ)ಗಾಗಿ. ಯೋಗ ಬಾಡಿಗಾಗಿ, “ಮೋಡಿ’ (ರೂಪ)ಗಾಗಿ ಅಲ್ಲ. ಯೋಗದಿಂದ ಆರೋಗ್ಯ ಸಂರಕ್ಷಣೆ ಸಾಧ್ಯ. ನನಗೆ 70 ವರ್ಷ ಪ್ರಾಯವಾದರೂ ದಿನನಿತ್ಯ ಒಂದು ತಾಸು ಬ್ಯಾಡ್ಮಿಂಟನ್‌ ಆಡುತ್ತೇನೆ ಎಂದು ಹೇಳಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಎನ್‌ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ| ಬಲವೀರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಐಟಿಕೆ ನಿರ್ದೇಶಕ ಪ್ರೊ| ಕೆ. ಉಮಾಮಹೇಶ್ವರ ರಾವ್‌ ಸ್ವಾಗತಿಸಿದರು. ಉಪನಿರ್ದೇಶಕ ಪ್ರೊ| ಅನಂತ ನಾರಾಯಣ ವಿ.ಎಸ್‌., ರಿಜಿಸ್ಟ್ರಾರ್‌ ಕೆ. ರವೀಂದ್ರನಾಥ್‌, ಸಂಚಾಲಕ ಪ್ರೊ| ಎ. ನಿತ್ಯಾನಂದ ಶೆಟ್ಟಿ, ಡಾ| ಅರುಣ್‌ ಎಂ. ಇಸೂರ್‌ ಉಪಸ್ಥಿತರಿದ್ದರು.

ಎನ್‌ಐಟಿಕೆಗೆ ಅಭಿನಂದನೆ
ಎನ್‌ಐಟಿಕೆ ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಂಡು ದೇಶದ 10 ಅತ್ಯುನ್ನತ ಎನ್‌ಐಟಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಶ್ವದರ್ಜೆಯ ವಿಜ್ಞಾನಿಗಳ ಮತ್ತು ತಂತ್ರಜ್ಞರ ದೊಡ್ಡ ಸಮೂಹ ರೂಪುಗೊಳ್ಳುವಲ್ಲಿ ಮಹತ್ತರ ಕೊಡುಗೆ ನೀಡಿದೆ. ಇದು ಇಲ್ಲಿಗೆ ನಿಲ್ಲಬಾರದು. ವಿಶ್ವದ ಅತ್ಯುತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಸ್ಥಾನಗಳಿಸುತ್ತ ಲಕ್ಷ್ಯವಿರಬೇಕು ಎಂದು ಉಪರಾಷ್ಟ್ರಪತಿ ಹೇಳಿದರು.

ಇಂತಹ ಉನ್ನತ ಶಿಕ್ಷಣ ಸಂಸೆಯ§ ಸ್ಥಾಪನೆಗೆ ಕಾರಣರಾದ ಯು. ಶ್ರೀನಿವಾಸ ಮಲ್ಯ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಮತ್ತು ನಮನಗಳನ್ನು ಸಲ್ಲಿಸುತ್ತೇನೆ ಎಂದವರು ಹೇಳಿದರು. ಘಟಿಕೋತ್ಸವ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಬಳಿಕ ಆಂಗ್ಲಭಾಷೆಯಲ್ಲಿ ಮುಂದುವರಿಸಿದರು. ಸಮಾರಂಭದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಅವರು ವೇದಿಕೆಯಿಂದ ಕೆಳಗಿಳಿದು ವಿದ್ಯಾರ್ಥಿಗಳ ಮತ್ತು ಸಭಿಕರ ಬಳಿಗೆ ತೆರಳಿ ಶುಭ ಹಾರೈಸಿದರು.

116 ಮಂದಿಗೆ ಪಿಎಚ್‌ಡಿ
ಘಟಿಕೋತ್ಸವದಲ್ಲಿ ಇಬ್ಬರಿಗೆ ಸ್ನಾತಕೋತ್ತರ ಚಿನ್ನದ ಪದಕ, 11 ಮಂದಿಗೆ ಬಿಟೆಕ್‌ ಚಿನ್ನದ ಪದಕ, 116 ಮಂದಿಗೆ ಪಿಎಚ್‌ಡಿ, 634 ಮಂದಿಗೆ ಸ್ನಾತಕೋತ್ತರ ಪದವಿ ಮತ್ತು 795 ಮಂದಿಗೆ ಬಿಟೆಕ್‌ ಪದವಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next