Advertisement

ದುರಸ್ತಿ ಕಂಡ ತಾಲೂಕು ಆಡಳಿತ ಲಿಫ್ಟ್

03:27 PM Jan 10, 2023 | Team Udayavani |

ರಾಮನಗರ: ತಾಲೂಕಿನ ಶಕ್ತಿ ಕೇಂದ್ರ ಎಂದೇ ಕರೆಸಿಕೊಳ್ಳುವ ಮಿನಿ ವಿದಾನಸೌದದಲ್ಲಿನ ಲಿಫ್ಟ್ ಚಾಲನೆಯಿಲ್ಲದೆ ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಈ ಸಂಬಂಧ “ನಿಂತಲ್ಲೆ ನಿಂತ ತಾಲೂಕು ಆಡಳಿತದ ಲಿಪ್ಟ್’ ಎಂಬ ಶೀರ್ಷಿಕೆಯಡಿ ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.

Advertisement

ನಂತರ ಎಚ್ಚೆತ್ತ ಅಧಿಕಾರಿಗಳು ಸಮಸ್ಯೆ ಪರಿಹರಿಸಿ ಕೊಳ್ಳುವ ಮೂಲಕ ಮತ್ತೆ ಚಾಲನೆ ದೊರೆತಿದೆ. ಇದ ರಿಂದ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳು ಮಹಡಿ ಹತ್ತುವ ಸಮಸ್ಯೆ ಪರಿಹಾರವಾದಂತಾಗಿದೆ. ಇದು ಉದಯವಾಣಿ ವರದಿ ಫಲಶ್ರುತಿ.

ಹೌದು… ರಾಮನಗರ ಜಿಲ್ಲಾ ಕೇಂದ್ರದಲ್ಲಿನ ತಾಲೂಕು ಆಡಳಿತದ ಸೌಧ ಮಿನಿ ವಿಧಾನಸೌದ ದಲ್ಲಿ ವಿಶೆಷಚೇತನರು, ಅಶಕ್ತರು, ಮಹಿಳೆಯರು ಮಹಡಿ ಹತ್ತಲು ಸಾಧುವಾಗುವುದಿಲ್ಲ ಎಂಬ ಕಾರಣಕ್ಕೆ ತಾಲೂಕು ಪಂಚಾಯ್ತಿ ಲಿಫ್ಟ್ ಅಳವಡಿಸುವ ಮೂಲಕ ನಾಗರಿಕರಿಗೆ ಸೌಲಭ್ಯ ಒದಗಿಸಿತ್ತು. ಆದರೆ, ತಾಲೂಕು ಪಂಚಾಯ್ತಿ ವತಿಯಿಂದ ಲಿಫ್ಟ್ ಅಳ ವಡಿಸಿದ್ದ ಕಂಪನಿಗೆ ಹಣ ಪಾವತಿ ಸಮರ್ಪಕ ವಾಗಿಲ್ಲದ 2.22 ಲಕ್ಷ ರೂ.ಬಾಕಿ ಉಳಿಸಿಕೊಂಡಿತ್ತು. ಇದರ ಪರಿಣಾಮ ದಿಢೀರ್‌ ಅಂತಾ ಲಿಫ್ಟ್ ಕಂಪನಿ ಲಿಫ್ಟ್ ಗೆ ಬೀಗ ಜಡಿದು ಹೋಗಿತ್ತು.

ವಿಶೇಷಚೇತನರಿಗೆ ತೀವ್ರ ತೊಂದರೆ: ಇದರಿಂದ ಸಾರ್ವಜನಿಕರು, ವಿಶೇಷಚೇತನರಿಗೆ ತೀವ್ರ ತೊಂದರೆಯಾಗಿತ್ತು. ತಮ್ಮ ಅವಾಂತರ ಮುಚ್ಚಿಕೊಳ್ಳಲು ಲಿಫ್ಟ್ ದುರಸ್ತಿಯಲ್ಲಿದೆ ಎಂದು ಹೇಳಿಕೊಳ್ಳಲಾಗುತ್ತಿತ್ತು. ಇದ ರಿಂದ ವಯೋವೃದ್ಧರು ಮತ್ತು ವಿಶೇಷಚೇತನರು ಮತ್ತು ಮಹಿಳೆಯರು ಮೂರು ಮಹಡಿ ಹತ್ತುವಲ್ಲಿ ಹೈರಾಣಾಗುತ್ತಿದ್ದರು. ಹಲವು ಮಂದಿ ಕಚೇರಿಗಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದನ್ನ ಗಮನಿಸಿ ನಿಂತಲ್ಲೆ ನಿಂತ ತಾಲೂಕು ಆಡಳಿತದ ಲಿಫ್ಟ್ ಎಂಬ ಶೀರ್ಷಿಕೆಯಡಿ ಸಾರ್ವ ಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಉದಯ ವಾಣಿ ಪತ್ರಿಕೆ ವರದಿ ಭಿತ್ತರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ಪ್ರದೀಪ್‌ ಲಿಫ್ಟ್ ಕೆಟ್ಟಿಲ್ಲ, ಲಿಫ್ಟ್ ಅಳವಡಿಕೆ ಸಂಸ್ಥೆಗೆ ಬಾಕಿ ಹಣ ನೀಡಬೇಕಿದೆ. ಅದಕ್ಕಾಗಿ ಅವರು ಬೀಗ ಹಾಕಿಕೊಂಡು ಹೋಗಿದ್ದಾರೆ. ಅಲ್ಲದೆ, ನನ್ನ ಗಮನಕ್ಕೆ ಈಗ ಬಂದಿದೆ. ಕೂಡಲೇ ಕ್ರಮಕೈಗೊಂಡು ಇನ್ನೆರಡು ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಲಿಫ್ಟ್ ಕಾರ್ಯಾರಂಭ ಮಾಡಿದೆ: ವರದಿ ಬಿತ್ತರಗೊಂಡ ಬೆನ್ನಲ್ಲೆ ಬಾಕಿ ಹಣ ಸಂದಾಯ ಮಾಡಿದ್ದು, ಇದೀಗ ಲಿಫ್ಟ್ ಕಾರ್ಯಾರಂಭ ಮಾಡಿದೆ. ಈಗಾಗಲೇ ಜಿಪಂ, ಎಇಇ ಅವರಿಂದ ಕಂಪನಿಗೆ ಚೆಕ್‌ ಕೊಡಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲಾಗಿದೆ. ಲಿಫ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಾಣಕಲ್‌ ನಟರಾಜ್‌ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಪತ್ರಿಕೆ ವರದಿ ಕಣ್ಣು ತೆರೆಸಿದೆ ಎಂದು ಪ್ರಶಂಸಿಸಿದರು.

Advertisement

ಲಿಫ್ಟ್ ಇಲ್ಲದೆ ತೊಂದರೆ: ತಾಲೂಕಿನ ಶಕ್ತಿ ಸೌಧವಾದ ಮಿನಿ ವಿಧಾನಸೌದದಲ್ಲಿ ತಳ ಮಹಡಿಯಲ್ಲಿ ತಹಶೀಲ್ದಾರ್‌ ಆಹಾರ ಇಲಾಖೆ ಇದ್ದರೆ ಮೊದಲ ಮಹಡಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಅವರ ಆಪ್ತ ಕಾರ್ಯಾಲಯ, ತಾಲೂಕು ಪಂಚಾಯ್ತಿ ಕಚೇರಿ ಚುನಾವಣಾ ಶಾಖೆ ಅಲ್ಲದ ಮೂರನೇ ಮಹಡಿಯಲ್ಲಿ ಜಿಲ್ಲಾ ಖಜಾನೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿವೆ ಮೂರನೇ ಮಹಡಿಗೆ ಹೆಚ್ಚು ವಯೋವೃದ್ಧರು ಮತ್ತು ವಿಶೇಷಚೇತನರು, ವಿಧವೆಯರು ಸೇರಿದಂತೆ ಹಲವರು ಅತಿ ಹೆಚ್ಚು ಸಂಚರಿಸುವುದು ಸಾಮಾನ್ಯವಾಗಿತ್ತು. ಅವರಿಗೆ ಲಿಫ್ಟ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರಿಂದ ಪತ್ರಿಕೆ ವರದಿ ಬಿತ್ತರಿಸಿತ್ತು.

ಕಳೆದ ಹಲವು ದಿನಗಳಿಂದ ಲಿಫ್ಟ್ ಕೆಟ್ಟಿತ್ತು. ನಾನು ಕೂಡ ಷುಗರ್‌ ಹೆಚ್ಚಿರುವ ರೋಗಿ. ಮೆಟ್ಟಿಲು ಹತ್ತಿ ಮೂರನೇ ಮಹಡಿಗೆ ಹೋಗಲಾಗದೆ ತೀರಾ ಸಂಕಷ್ಟ ಪಡುತ್ತಿದ್ದೆ. ಯಾರಿಗೆ ಹೇಳಿದ್ರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಉದಯವಾಣಿ ವರದಿಯಿಂದ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸಿದ್ದಾರೆ. –ಬಲರಾಮ, ಸಾಮಾಜಿಕ ಕಾರ್ಯಕರ್ತ

ಸಾರ್ವಜನಿಕರಿಗೆ ಸಹಾಯವಾಗ ಲೆಂದು ನಾನು ಅಧ್ಯಕ್ಷನಾಗಿದ್ದಾಗ ಲಿಫ್ಟ್ ಅಳವಡಿಕೆಗೆ ಚಾಲನೆ ನೀಡಿದ್ದೆ. ಲಿಫ್ಟ್ ಅಳವಡಿಕೆ ಕಂಪನಿ ಕಂಪ್ಲಿಟಿಂಗ್‌ ಸರ್ಟಿಫಿಕೇಟ್‌ ನೀಡಿರಲಿಲ್ಲ ಎನ್ನುವ ಕಾರಣಕ್ಕೆ ಇಲಾಖೆ ಕೂಡ ಹಣ ಪಾವತಿಸಿರಲಿಲ್ಲ. ನಾನು ಇಂದು ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹಾರ ಮಾಡಿಸಿದ್ದು, ಲಿಫ್ಟ್ ಚಾಲನೆಯಾಗಿದೆ. ಮುಂದೆ ಇಂತಹ ಸಮಸ್ಯೆ ಆಗುವುದಿಲ್ಲ. – ಗಾಣಕಲ್‌ ನಟರಾಜ್‌, ತಾಪಂ ಸದಸ್ಯ ಮಾಜಿ ಅಧ್ಯಕ್ಷ

ಎಂ.ಎಚ್‌. ಪ್ರಕಾಶ್‌ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next