Advertisement

ಹದಗೆಟ್ಟ  ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

08:41 PM Jul 10, 2021 | Team Udayavani |

ಕೋಲಾರ: ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನುಸರಿಪಡಿಸಿ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆತಪ್ಪಿಸಬೇಕು ಎಂದು ಆಗ್ರಹಿಸಿ ನಗರದ ಎಂ.ಬಿ.ರಸ್ತೆಯಲ್ಲಿನ ಹಳ್ಳಗಳ ಬಳಿ ಸಾಮೂಹಿಕ ನಾಯಕತ್ವದ ರೈತ ಸಂಘದಿಂದ ಹೋರಾಟ ಮಾಡಿ, ಪಿಡಬ್ಲೂéಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆ ನೇತೃತ್ವವಹಿಸಿಮಾತನಾಡಿದ ರೈತ ಸಂಘದರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನಗ ರಾದ್ಯಂತಹದಗೆಟ್ಟಿರುವ ರಸ್ತೆಗಳು ವಾಹನ ಸವಾರರಿಗೆ ನರಕದರ್ಶನ ಮಾಡಿಸುತ್ತಿವೆ. ದೇವರು ವರ ಕೊಟ್ಟರೂಪೂಜಾರಿ ಕೊಡಲಿಲ್ಲ ಎಂಬ ಗಾಧೆಯಂತೆ ಸರ್ಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರೂ ಅಭಿವೃದ್ಧಿಪಡಿಸಿಲ್ಲ ಎಂದು ಹೇಳಿದರು.

ವಿಳಂಬ ನೀತಿ: ಹಲವು ವರ್ಷಗಳಿಂದ ನಗರದಲ್ಲಿಅಮೃತ್‌ಸಿಟಿ, ನಗರೋತ್ಥಾನ ಯೋಜನೆಗಳಡಿ,ಸಾಕಷ್ಟು ರಸ್ತೆಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದರಿಂದಾಗಿ ನಗರದ ಒಳಭಾಗದ ಬಹುತೇಕ ರಸ್ತೆಅಗೆಯಲಾಗಿತ್ತು. ಆದರೆ, ಕೆಲವೇ ಕೆಲವು ರಸ್ತೆಗಳಿಗೆಬೇಕಾಬಿಟ್ಟಿ ಎಂಬಂತೆ ಡಾಂಬರು ಹಾಕಲಾಗಿದ್ದು,ಸಾಕಷ್ಟು ರಸ್ತೆಗಳು ಹಾಗೆಯೇ ಉಳಿದಿವೆ.

ಇದರ  ಜೊತೆಗೆ ಮುಖ್ಯರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೂ ಚಾಲನೆನೀಡಲಾಗಿದ್ದು, ಅಭಿವೃದ್ಧಿ ಕಾಮಗಾರಿ ಆರಂಭದಲ್ಲಿಚುರುಕಾಗಿದ್ದರೂ ಆನಂತರ ಸಾಕಷ್ಟು ವಿಳಂಬ ನೀತಿಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next