ಬಂಗಾರಪೇಟೆ: ತಾಲೂಕಿನ ಮಾಗೊಂದಿ ಗ್ರಾಪಂನ ಕದಿರೇನಹಳ್ಳಿ ಗ್ರಾಮದಿಂದ ರೈತರ ಜಮೀನಿಗೆ ಹೋಗುವ ರಸ್ತೆ ಮಳೆಯಿಂದ ಕೊರಕಲು ಬಿದ್ದಿದ್ದು, ಅಭಿವೃದ್ಧಿ ಪಡಿಸುವಲ್ಲಿ ಗ್ರಾಪಂ ಅಧಿಕಾರಿಗಳು ವಿಫಲವಾಗಿದ್ದಾರೆ.
ನರೇಗಾದಡಿ ರಸ್ತೆ ದುರಸ್ತಿ ಮಾಡುವಂತೆ ಪಿಡಿಒ ಶಂಕರ್‌ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ನರೇಗಾದಡಿ “ನಮ್ಮ ಹೊಲ-ನಮ್ಮ ರಸ್ತೆ’, ಗಾಮೀಣಾಭಿವೃದ್ಧಿ ಯೋಜನೆಯಡಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಹಾಗೂರಾಜ್ಯ ಸರ್ಕಾರ ಕೋಟ್ಯಂತರ ರೂ. ಹಣನೀಡಿದ್ರೂ, ಸಮರ್ಪಕವಾಗಿ ಬಳಕೆಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬುದಕ್ಕೆ ಈ ರಸ್ತೆ ಸಾಕ್ಷಿಯಾಗಿದೆ.
ರಸ್ತೆ ಅಭಿವೃದ್ಧಿಗೆ ಸೂಚನೆ: ಕಾರ್ಯಕ್ರಮವೊಂದರಲ್ಲಿ ಕದಿರೇನಹಳ್ಳಿ ಗ್ರಾಮಸ್ಥರು ಸಂಸದ ಎಸ್.ಮುನಿಸ್ವಾಮಿ ಅವರನ್ನು ಭೇಟಿ ಮಾಡಿ, ಸಮಸ್ಯೆ ಹೇಳಿಕೊಂಡಿದ್ದರು.ಆಗ ಕೂಡಲೇ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ರೂಪಿಸಿ, ಜಿಪಂ ಸಿಇಒಯಿಂದ ಅನುಮೋದನೆ ಪಡೆದುಕೊಂಡು, ರಸ್ತೆ ಅಭಿವೃದ್ಧಿಪಡಿಸುವಂತೆ ತಾಪಂ ಇಒ ಎನ್.ವೆಂಕಟೇಶಪ್ಪ,ಮಾಗೊಂದಿ ಪಿಡಿಒ ಶಂಕರ್‌ಗೆ ಸಂಸದರು ಸೂಚನೆ ನೀಡಿದ್ದರು.
ಈ ಸಂದರ್ಭದಲ್ಲಿ ಸಂಸದರಸೂಚನೆಗೆ ಒಪ್ಪಿಗೆ ಸೂಚಿಸಿದ ಪಿಡಿಒ,ಮೂರು ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಳ್ಳದೇ ನರೇಗಾಯೋಜನೆಯಡಿಯಲ್ಲಿ ಅನುದಾನಬರುವುದಿಲ್ಲ. ಬಂಡವಾಳ ಹಾಕುವವರು ಯಾರು? ಎಂದು ಹೇಳಿ ರಸ್ತೆ ಅಭಿವೃದ್ಧಿಪಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ಪ್ರತಿ ನಿತ್ಯವೂ 5 ಅಡಿ ನೀರು ರಸ್ತೆಯಲ್ಲಿಹರಿಯುತ್ತಿದೆ. ಇದರಿಂದ ರೈತರು, ಮಹಿಳೆಯರು, ಮಕ್ಕಳು, ವೃದ್ಧರು, ಜಾನುವಾರುಗಳು ಈ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ.
-ಎಂ.ಸಿ.ಮಂಜುನಾಥ್