Advertisement

ಹದಗೆಟ್ಟ ರಸ್ತೆ ದುರಸ್ತಿ ಪಡಿಸಿ

02:51 PM Feb 08, 2020 | Suhan S |

ಶ್ರೀನಿವಾಸಪುರ: ಒಳಚರಂಡಿ ದುರಸ್ತಿಗಾಗಿ ಪಟ್ಟಣದ ರಾಜಾಜಿ ರಸ್ತೆಯ ನಿತ್ಯಾಧಾರಮಾತೆ ದೇಗುಲ ಮುಂಭಾಗದ ರಸ್ತೆಯನ್ನು ಅಗೆದು ಸಮತಟ್ಟು ಮಾಡದ ಕಾರಣ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

Advertisement

ಪಟ್ಟಣ ಬಸ್‌ ನಿಲ್ದಾಣದಿಂದ ಕೋಲಾರಕ್ಕೆ ಪ್ರತಿದಿನ ರಾಜಾಜಿ ರಸ್ತೆ ಮೂಲಕ ಬಸ್‌, ಕಾರುಗಳು, ದ್ವಿಚಕ್ರ ವಾಹನಗಳು ಓಡಾಡುತ್ತವೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇಲ್ಲೇ ಹೋಗಬೇಕು. ರಸ್ತೆ ಹದಗೆಟ್ಟಿರುವ ಕಾರಣ ಪ್ರಾಯ ಭಯದಲ್ಲೇ ಓಡಾಡಬೇಕಿದೆ. ಒಳಚರಂಡಿ ದುರಸ್ತಿ ಪಡಿಸಿ ತಿಂಗಳಾಗುತ್ತಿದೆ. ಕೆಲಸ ಮಾಡಿರುವ ಜಾಗದಲ್ಲಿ ನೆಲ ಸಮತಟ್ಟು ಕಂಡಿಲ್ಲ, ಇದ್ದ ಡಾಂಬರ್‌ ಕಿತ್ತು ಹಾಕಲಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಎದುರುಗಡೆಯಿಂದ ಲಾರಿ ಟೆಂಪೋ ಬಂದ್ರೆ, ಸೈಡು ಕೊಡಲು ಸಾಧ್ಯವಾಗದ ಮಟ್ಟಿಗೆ ತಗ್ಗು ಬಿದ್ದಿದೆ. ಡಾಂಬರು ರಸ್ತೆಯಿಂದ ವಾಹನ ಕೆಳಗಿಳಿಸಲಾಗದ ಮಟ್ಟಿಗೆ ಡಾಂಬರು ಕಡಿದಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ರಾತ್ರಿ ಸಮಯದಲ್ಲಿ ಈ ಜಾಗದಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ಓಡಾಡಬೇಕಿದೆ.

ಈ ರಸ್ತೆಯಲ್ಲಿ ಹೆಚ್ಚು ಗುಂಡಿ ಬಿದ್ದಿದ್ದರಿಂದ ಪುರಸಭೆ ಕಾರ್ಮಿಕರು ಜಲ್ಲಿ ಹರಡಿ ಸಮತಟ್ಟಿಗೆ ಪ್ರಯತ್ನ ಮಾಡಿದ್ದರೂ ರಸ್ತೆ ಪೂರ್ಣ ಪ್ರಮಾಣದಲ್ಲಿ ಡಾಂಬರ್‌ ಹಾಕಿಲ್ಲ. ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಸರ್ಕಸ್‌ ಮಾಡಿಕೊಂಡು ನಡೆಯಬೇಕಿದೆ. ಪುರಸಭೆ ಅಧಿಕಾರಿಗಳು ಕೂಡಲೇ ಪ್ರಾಣಾಪಾಯ ಸಂಭವಿಸುವ ಮೊದಲು ರಸ್ತೆ ದುರಸ್ತಿ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next