Advertisement
ಗುಜರಾತ್ ಮೂಲದ ಆರ್‌ಎನ್‌ಸಿ ಸಂಸ್ಥೆ ವಿದ್ಯುತ್ ಮೀಟರ್‌ಗಳನ್ನು ಸಮರ್ಪಗೊಳಿಸುವ ಕೆಲಸವನ್ನು ಆರಂಭಿಸಿದೆ. ವಿದ್ಯುತ್ ಮೀಟರ್ ವ್ಯವಸ್ಥೆ ಡಿಜಿಟಲೀಕರಣಗೊಂಡ ಬಳಿಕ ವಂಚನೆ ಸೇರಿದಂತೆ ವಿವಿಧ ಅವ್ಯವಸ್ಥೆಗಳು ಕಡಿಮೆಯಾಗಿದ್ದು, ಮೀಟರ್ ಅನ್ನು ಮತ್ತಷ್ಟು ಸಮರ್ಪಕಗೊಳಿಸುವ ಕೆಲಸ ವನ್ನು ಮಾಡಲಾಗುತ್ತಿದೆ.
ಎತ್ತರ . ದಲ್ಲಿರುವ . ಮೀಟರ್ ಅನ್ನು ಕೆಳಭಾಗದಲ್ಲಿ . ಅಳವಡಿಸುವುದು, ಮನೆಯ ಒಳಗಿರುವ ಮೀಟರ್ ಅನ್ನು ಹೊರಭಾಗದಲ್ಲಿ ಅಳ ವಡಿಸುವುದು, ಅಗತ್ಯವಿರುವ ಮೀಟರ್‌ಗೆ ಪೆಟ್ಟಿಗೆ ಅಳವಡಿಸುವ ಕೆಲಸವನ್ನು ಗುತ್ತಿಗೆದಾರ ಸಂಸ್ಥೆಯ ಕಾರ್ಮಿಕರು ಕೆಲವು ಕಡೆಗಳಲ್ಲಿ ಆರಂಭಿಸಿದ್ದಾರೆ. ಆದರೆ ಪೆಟ್ಟಿಗೆಯನ್ನು ಸಮರ್ಪಕ ರೀತಿಯಲ್ಲಿ ಅಳವಡಿಸುತ್ತಿಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಈ ಮೀಟರ್‌ಗೆ ಅಳವಡಿಸಿದ ಪೆಟ್ಟಿಗೆ ಕಳಚಿ ಬಿದ್ದಿದೆ. ಕೆಲವು ಕಡೆಗಳಲ್ಲಿ ಹಗ್ಗದಲ್ಲಿ ಎಳೆದು ಕಟ್ಟುವ ಅನಿವಾರ್ಯತೆ ಎದುರಾಗಿದೆ. ಗಮ್‌ಟೇಪ್ ಅಳವಡಿಸಿ ತಾತ್ಕಾಲಿಕವೆಂಬಂತೆ ಮೀಟರ್ ಹಾಗೂ ಪೆಟ್ಟಿಗೆಯನ್ನು ಅಳವಡಿಸಲಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಹಣವೂ ಪಡೆವ ಸಿಬಂದಿ
ಮೆಸ್ಕಾಂ ಕುಂಬ್ರ ಉಪ ವಿಭಾಗ ವ್ಯಾಪ್ತಿಯ ಕಾವು, ಮಾನ್ಯಡ್ಕ ಪರಿಸರದ ಕಾಲನಿ, ಮನೆಗಳಲ್ಲಿ ಇಂತಹ ಸ್ಥಿತಿ ಕಂಡುಬಂದಿದೆ. ಜತೆಗೆ ಗ್ರಾಹಕರಿಂದ ಹಣ ಪಡೆದುಕೊಳ್ಳಬಾರದು ಎನ್ನುವ ನಿರ್ದೇಶನವಿದ್ದರೂ ಗುತ್ತಿಗೆದಾರ ಸಿಬಂದಿ ಮನೆಯವರಿಂದ ಖರ್ಚಿನ ಹಣ ಪಡೆಯುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
Related Articles
ವಿದ್ಯುತ್ ಮೀಟರ್ ವ್ಯವಸ್ಥೆ ಯನ್ನು ಸಮರ್ಪಕಗೊಳಿಸುವ ಕೆಲಸ ವನ್ನು ದೀನ್ ದಯಾಳ್ ಯೋಜ ನೆಯ ಮೂಲಕ ನಡೆಸಲಾಗುತ್ತಿದೆ. ಗುತ್ತಿಗೆದಾರ ಸಂಸ್ಥೆಯವರು ಮೀಟರ್, ಪೆಟ್ಟಿಗೆಯನ್ನು ಸರಿ ಯಾಗಿ ಅಳವಡಿಸಬೇಕು. ಈ ಕುರಿತು ತತ್‌ಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
-ಪ್ರಶಾಂತ್ ಪೈ,
ಮೆಸ್ಕಾಂ ಎಇಇ, ಗ್ರಾಮಾಂತರ ವಿ.
Advertisement