ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್‌ನ ಪೈಶಾಚಿಕ ಕೃತ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅವರೇ ತೆಗೆದ ಫೋಟೋಗಳು ಲಭ್ಯವಾಗಿವೆ. ರೇಣುಕಾಸ್ವಾಮಿಯ ಹಿಂದೆ ಲಾರಿಗಳು ನಿಂತಿವೆ. ನೆಲದಲ್ಲಿ ಕುಳಿತಿರುವ ಆತ ಕೈಚಾಚಿ ಅಂಗಲಾಚುತ್ತಿದ್ದಾನೆ.
ಆತನ ಕಣ್ಣುಗಳಲ್ಲಿ ಗಾಯಗಳಾಗಿವೆ. ಹಲ್ಲುಗಳು ಉದುರಿವೆ. ಮೈಮೇಲೆ ಹತ್ತಾರು ಗಾಯದ ಗುರುತುಗಳಿವೆ. ತಲೆಯ ಭಾಗದಲ್ಲಿ 3-4 ಇಂಚು ಆಳಕ್ಕೆ ಬಿಚ್ಚಿ ಗಾಯವಾಗಿದೆ. ಕಿವಿ ಕೂಡ ತುಂಡಾಗಿದೆ. ಹಾಗೆಯೇ ಹತ್ಯೆಗೆ ಬಳಸಿದ್ದ ಮೆಗ್ಗಾರ್, ಹಗ್ಗ, ಪೊಲೀಸ್(ಸೆಕ್ಯೂರಿಟಿ ಗಾರ್ಡ್ ಬಳಸಿದ) ಲಾಠಿ, ಹಲ್ಲೆಗೆ ಬಳಸಿದ್ದ ಮರದ ರಿಪೀಸ್ ಫೋಟೋಗಳು ಮತ್ತು ನಿತ್ರಾಣಗೊಂಡು ಅಂಗಾತ ಮಲಗಿರುವ ಫೋಟೋಗಳು ಕೂಡ ರಿವೀಲ್ ಆಗಿದೆ. ಈ ಅಂಶಗಳನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.
ಕೃತ್ಯದ ವೇಳೆ ಪವಿತ್ರಾಗೌಡ ಆಪ್ತ ಪವನ್ ಫೋಟೋ ತೆಗೆದು ಅದನ್ನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹಾಗೂ ದರ್ಶನ್ ಆಪ್ತ, ಪ್ರದೂಷ್‌ಗೆ ಕಳುಹಿಸಿದ್ದ. ರೇಣುಕಸ್ವಾಮಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಈ ಫೋಟೋಗಳನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಿದ್ದರು. ಆದರೆ ದತ್ತಾಂಶ ಮರು ಸಂಗ್ರಹದ ವೇಳೆ ಆ ಫೋಟೋಗಳು ಪತ್ತೆಯಾಗಿವೆ.
ಜಾಮೀನು ಅರ್ಜಿ ದಾಖಲೆಗೆ ದರ್ಶನ್ ಸಹಿ?
ಬಳ್ಳಾರಿ: ಎಂಟು ದಿನಗಳಿಂದ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ನನ್ನು ನೋಡಲು ಪತ್ನಿ ವಿಜಯಲಕ್ಷೀ¾ ಸೇರಿ ಮೂವರು ಸಂಬಂ ಧಿಕರು ಗುರುವಾರ ಸಂಜೆ ಜೈಲಿಗೆ ಆಗಮಿಸಿದ್ದು, ಜಾಮೀನು ಸಂಬಂಧ ದರ್ಶನ್ ಜತೆ ಚರ್ಚಿಸಿ ಸಹಿ ಪಡೆದಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರವಷ್ಟೇ ಪತಿಯನ್ನು ನೋಡಲು ಬಂದಿದ್ದ ವಿಜಯಲಕ್ಷ್ಮೀ , ಇದೀಗ ದರ್ಶನ್ ಸಹೋದರ ದಿನಕರ್ ತೂಗುದೀಪ, ತಂಗಿಯ ಪತಿ ಸುಶಾಂತ್ ನಾಯ್ಡು ಅವರೊಂದಿಗೆ 2ನೇ ಬಾರಿಗೆ ಕೋರ್ಟ್ ದಾಖಲೆಗಳೊಂದಿಗೆ ಭೇಟಿ ನೀಡಿದ್ದಾರೆ. ಸೆ. 9ಕ್ಕೆ ನ್ಯಾಯಾಂಗ ಬಂಧನ ಅಂತ್ಯವಾಗುವ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಪತ್ನಿಯು ದರ್ಶನ್‌ಗೆ ಬೇಕರಿ ತಿನಿಸುಗಳು, ಡ್ರೈಫ್ರೂಟ್ಸ್, ಕುಕ್ಕೀಸ್, ಬಿಸ್ಕತ್ ಮತ್ತು ಬಟ್ಟೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.