Advertisement

ರೇಣುಕಾಸ್ವಾಮಿ-ಪವಿತ್ರಾ ಸಂದೇಶ: ಇನ್‌ಸ್ಟಾ ಮೊರೆ

12:46 AM Jun 22, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹಾಗೂ ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡ ನಡುವಿನ ಸಂದೇಶಗಳ ವಿವರ ನೀಡುವಂತೆ ಕೋರಿ ಇನ್‌ಸ್ಟಾಗ್ರಾಂಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ.

Advertisement

ನಟಿ ಪವಿತ್ರಾ ಗೌಡ ಫೋನ್‌ ವಶಪಡಿಸಿಕೊಂಡು ರಿಟ್ರೈವ್‌ ಮಾಡಲು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆದರೆ ರೇಣುಕಾಸ್ವಾಮಿ ಮೊಬೈಲ್‌ ಡೇಟಾವನ್ನು ಪಡೆಯಬೇಕಿದೆ. ಆತನನ್ನು ಹತ್ಯೆ ಮಾಡಿದ ಬಳಿಕ ಆತನ ಮೊಬೈಲ್‌ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಎಸೆದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಕಳೆದ ಕೆಲ ದಿನಗಳಿಂದ ಪೊಲೀಸರು ರೇಣುಕಾಸ್ವಾಮಿ ಫೋನ್‌ಗಾಗಿ ಸುಮನಹಳ್ಳಿಯ ಅಪಾರ್ಟ್‌ಮೆಂಟ್‌ ಬಳಿಯ ಮೋರಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಮೊಬೈಲ್‌ ಮಾತ್ರ ಪತ್ತೆಯಾಗಿಲ್ಲ.

ಡಿಸಿಪಿ (ಪಶ್ಚಿಮ) ಗಿರೀಶ್‌ ನೇತೃತ್ವದಲ್ಲಿ ವಿಜಯನಗರ ಎಸಿಪಿ ಚಂದನ್‌ ತನಿಖೆ ನಡೆಸುತ್ತಿದ್ದು, ತಾಂತ್ರಿಕ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂಗೆ ಪತ್ರ ಬರೆದು ಇಬ್ಬರ ನಡುವೆ ನಡೆದ ಸಂಭಾಷಣೆಯ ಮಾಹಿತಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಮೊಬೈಲ್‌ ಸಿಕ್ಕಿದರೆ, ಅದರಲ್ಲಿ ಆತ ಪವಿತ್ರಾ ಜತೆಗೆ ಏನೆಲ್ಲ ಚಾಟ್‌ ಮಾಡಿದ್ದಾನೆ ಎಂಬಿತ್ಯಾದಿ ವಿವರಗಳು, ತಾಂತ್ರಿಕ ಸಾಕ್ಷ್ಯಗಳು ಸಿಗಲಿವೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಲಿದೆ. ಇದು ಕೊಲೆಯ ಹಿಂದಿನ ಉದ್ದೇಶವನ್ನು ಸಾಬೀತುಪಡಿಸಲು ಪೊಲೀಸರಿಗೆ ಸಹಕಾರಿ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next